ಬುಧವಾರ, ಜೂನ್ 3, 2020
27 °C

ಉಗ್ರರ ನಡುವಿನ ಕಾಳಗ: ವಾತಾವರಣ ಕಾರಣ ಗಾಯಗೊಂಡ ಯೋಧರ ಸ್ಥಳಾಂತರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಜಮ್ಮು-ಕಾಶ್ಮೀರ: ಕೆರೆನ್ ಸೆಕ್ಟರ್‌ನಲ್ಲಿ ಶನಿವಾರದಿಂದ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆಯುತ್ತಿರುವ ಭೀಕರ ಹೋರಾಟದಲ್ಲಿ ಗಾಯಗೊಂಡ ಯೋಧರನ್ನು ವಾತಾವರಣ ವೈಪರೀತ್ಯದಿಂದ ಸ್ಥಳಾಂತರಿಸಲಾಗುತ್ತಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.

ಗಡಿ ನಿಯಂತ್ರಣ ರೇಖೆಯಿಂದ ಒಳಗೆ ನುಸುಳಲು ಯತ್ನಿಸುತ್ತಿರುವ ಉಗ್ರರನ್ನು ಸದೆಬಡಿಯಲು ಸೇನೆಯು ನಡೆಸುತ್ತಿರುವ ಕಾರ್ಯಾಚರಣೆ ತೀವ್ರಗೊಂಡಿದ್ದು 5 ಮಂದಿ ಉಗ್ರರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಹಲವು ಉಗ್ರರು ಗಾಯಗೊಂಡಿರುವ ಶಂಕೆ ಇದ್ದು, ಐದು ಮಂದಿ ಯೋಧರೂ ಹುತಾತ್ಮರಾಗಿದ್ದಾರೆ. ಶನಿವಾರದಿಂದ ಭಾನುವಾರದವರೆಗೆ ನಡೆದ ಕಾರ್ಯಾಚರಣೆಯಲ್ಲಿ 9 ಮಂದಿ ಉಗ್ರರು ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದರು. ಕಾರ್ಯಾಚರಣೆಯ ತೀವ್ರತೆಯನ್ನು ಗಮನಿಸಿರುವ ಸೇನೆ ಹೆಚ್ಚಿನ ಯೋಧರನ್ನು ಈ ಭಾಗಕ್ಕೆ ನಿಯೋಜಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು