ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್ 15ರಿಂದ ರೈಲು ಸಂಚಾರ ಪುನರಾರಂಭಕ್ಕೆ ಭಾರತೀಯ ರೈಲ್ವೆ ಸಿದ್ಧತೆ

Last Updated 4 ಏಪ್ರಿಲ್ 2020, 9:23 IST
ಅಕ್ಷರ ಗಾತ್ರ

ನವದೆಹಲಿ: 21 ದಿನಗಳ ಲಾಕ್‌ಡೌನ್ ಬಳಿಕ ಏಪ್ರಿಲ್ 15ರಿಂದ ರೈಲು ಸಂಚಾರ ಪುನರಾರಂಭಿಸಲು ಭಾರತೀಯ ರೈಲ್ವೆ ಸಿದ್ಧತೆ ಆರಂಭಿಸಿದೆ.

ಸುರಕ್ಷತಾ ಸಿಬ್ಬಂದಿ, ಚಾಲಕರು, ಗಾರ್ಡ್‌ಗಳು, ಟಿಟಿಇ ಮತ್ತು ಇತರ ಸಿಬ್ಬಂದಿಗೆ ಏಪ್ರಿಲ್ 15ರಂದು ಕರ್ತವ್ಯಕ್ಕೆ ಮರಳಲು ಸಿದ್ಧರಾಗಿರುವಂತೆ ಸೂಚಿಸಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

ಆದಾಗ್ಯೂ, ಸರ್ಕಾರದಿಂದ ಹಸಿರುನಿಶಾನೆ ದೊರೆತ ಬಳಿಕವಷ್ಟೇ ರೈಲು ಸಂಚಾರ ಆರಂಭಗೊಳ್ಳಲಿದೆ. ಎಲ್ಲ ವಲಯಗಳಲ್ಲಿ ಸಂಚಾರ ಪುನರಾರಂಭಕ್ಕೆ ಸಂಬಂಧಿಸಿದ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಎಲ್ಲ 17 ವಲಯಗಳಿಗೂ ಕಾರ್ಯಾಚರಣೆಗೆ ಸಿದ್ಧವಾಗಿರುವಂತೆ ಸೂಚಿಸಲಾಗಿದೆ. ವಾರದ ಒಳಗಾಗಿ ಎಲ್ಲ ವಲಯಗಳಿಗೂ ಕ್ರಿಯಾಯೋಜನೆ ಕಳುಹಿಸಿಕೊಡಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಜಧಾನಿ,ಶತಾಬ್ಧಿ, ತುರಂತೋ ಸೇರಿದಂತೆ ಶೇ 80ರಷ್ಟು ರೈಲುಗಳು ಏಪ್ರಿಲ್ 15ರಿಂದಲೇ ಸಂಚಾರ ಪುನರಾರಂಭಿಸುವ ನಿರೀಕ್ಷೆ ಇದೆ. ಸ್ಥಳೀಯ ರೈಲುಗಳೂ ಸಂಚರಿಸುವ ಸಾಧ್ಯತೆ ಇದೆ.

ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡುವುದನ್ನು ತಡೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 24ರಂದು ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದರು. ಹೀಗಾಗಿ ಪ್ರಯಾಣಿಕ ರೈಲು ಸಂಚಾರ ಸ್ಥಗಿತಗೊಂಡಿತ್ತು. ಸರಕು ಸಾಗಣೆ ರೈಲುಗಳು ಸಂಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT