ಗುರುವಾರ , ಜೂನ್ 4, 2020
27 °C
ಬೋಗಿಗಳಲ್ಲಿ ಪ್ರತ್ಯೇಕತಾ ವಾರ್ಡ್‌ ನಿರ್ಮಾಣ ಸಿದ್ಧತೆಯಲ್ಲಿ ನೈರುತ್ಯ ರೈಲ್ವೆ

ಕೋವಿಡ್‌–19: ರೈಲು ಬೋಗಿಗಳು ಸಂಚಾರಿ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ತುರ್ತು ಸೇವೆಗಾಗಿ ರೈಲು ಬೋಗಿಗಳನ್ನು ಪ್ರತ್ಯೇಕಿಸಲಾದ (ಐಸೊಲೇಷನ್‌) ವಾರ್ಡ್‌ ಮತ್ತು ತೀವ್ರ ನಿಗಾ ಘಟಕಗಳನ್ನಾಗಿ(ಐಸಿಯು) ನೈರುತ್ಯ ರೈಲ್ವೆ ಮಾರ್ಪಡಿಸುತ್ತಿದೆ.

‘ಕೋವಿಡ್‌–19 ಮೂರು ಮತ್ತು ನಾಲ್ಕನೇ ಹಂತಕ್ಕೆ ವ್ಯಾಪಿಸಿದರೆ ರೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಆಸ್ಪತ್ರೆಗಳ ಕೊರತೆ ಉಂಟಾಗಲಿದೆ. ಈ ನಿಟ್ಟಿನಲ್ಲಿ ಬೋಗಿಗಳನ್ನೇ ಸಂಚಾರಿ ಆಸ್ಪತ್ರೆ ಮಾದರಿಯಲ್ಲಿ ಮಾರ್ಪಾಡು ಮಾಡಲಾಗುತ್ತಿದೆ. ಮೈಸೂರು ಮತ್ತು ಹುಬ್ಬಳ್ಳಿ ವರ್ಕ್‌ಶಾಪ್‌ನಲ್ಲಿ ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಎಷ್ಟು ಬೋಗಿಗಳಲ್ಲಿ ಈ ವ್ಯವಸ್ಥೆ ಮಾಡಬೇಕು ಎಂಬುದನ್ನು ಪರಿಸ್ಥಿತಿ ನೋಡಿ ನಿರ್ಧರಿಸಲಾಗುತ್ತದೆ. ರೈಲ್ವೆ ಮಂಡಳಿ ಮತ್ತು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದ ನಂತರ ಸೇವೆ ಪ್ರಾರಂಭಿಸಲಾಗುವುದು’ ಎಂದು ಅವರು ತಿಳಿಸಿದರು. 

ದೇಶದಲ್ಲಿ ಸದ್ಯ, 637 ಬೋಗಿಗಳನ್ನು ಈ ರೀತಿಯಾಗಿ ಮಾರ್ಪಡಿಸಲು ತೀರ್ಮಾನಿಸಲಾಗಿದ್ದು, ಸಂಚರಿಸುತ್ತಿದ್ದ ಮತ್ತು ಸುಸ್ಥಿತಿಯಲ್ಲಿದ್ದ ಬೋಗಿಗಳನ್ನೇ ಇದಕ್ಕಾಗಿ ಬಳಸಲಾಗುತ್ತಿದೆ.

ಹೇಗಿರಲಿದೆ ಬೋಗಿ ಆಸ್ಪತ್ರೆ ?

* ಬೋಗಿಯಲ್ಲಿನ ಎರಡು ಶೌಚಾಲಯಗಳನ್ನು ಒಗ್ಗೂಡಿಸಿ, ಸ್ನಾನಗೃಹವನ್ನಾಗಿ ಮಾಡಲಾಗುತ್ತಿದೆ. ಶೌಚ ಗುಂಡಿಯನ್ನು  ಮುಚ್ಚಿ, ನೆಲಹಾಸು ಬಳಸಿ ಸಮತಟ್ಟು ಮಾಡಲಾಗುತ್ತದೆ

* ರೋಗಿಯನ್ನು ಮಲಗಿಸಿರುವ ಕಡೆಯಲ್ಲಿ ಮಧ್ಯದ ಬೋಗಿಯನ್ನು ತೆಗೆಯಲಾಗುತ್ತದೆ

* ಪ್ರತಿ ಬೋಗಿಯಲ್ಲಿ ವೈದ್ಯಕೀಯ ಉಪಕರಣಗಳನ್ನು ಇಡಲು 220 ವೋಲ್ಟ್‌ನ ವಿದ್ಯುತ್‌ ಪಾಯಿಂಟ್‌ ಮಾಡಲಾಗುತ್ತದೆ

* ಪ್ರತಿ ಬೋಗಿಯಲ್ಲಿ 10 ಪ್ರತ್ಯೇಕಿಸಲಾದ ವಾರ್ಡ್‌ಗಳನ್ನು ಮಾಡಲಾಗುತ್ತದೆ. 

* ಪ್ರತಿ ಬೋಗಿಗೆ 415 ವೋಲ್ಟ್ ಸಾಮರ್ಥ್ಯದ ವಿದ್ಯುತ್‌ ಸಂಪರ್ಕ ನೀಡಲಾಗುತ್ತದೆ. 

* ‍ಬೋಗಿಯನ್ನು ನಿಯಮಿತವಾಗಿ ಸೋಂಕು ಮುಕ್ತಗೊಳಿಸಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು