ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತನನ್ನು ವಿಮಾನದಿಂದ ಕೆಳಗಿಳಿಸಿದರು

ಕೊಚ್ಚಿ: ದುಬೈಗೆ ಹೊರಟಿದ್ದ ವಿಮಾನದಲ್ಲಿ ನಡೆದ ಘಟನೆ, 17 ಮಂದಿ ಮೇಲೆ ನಿಗಾ
Last Updated 15 ಮಾರ್ಚ್ 2020, 19:46 IST
ಅಕ್ಷರ ಗಾತ್ರ

ಕೊಚ್ಚಿ/ತಿರುವನಂತಪುರ: ಕೊಚ್ಚಿ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವಿಮಾನದಲ್ಲಿ ಕೋವಿಡ್‌–19 –ಪೀಡಿತ ಬ್ರಿಟನ್‌ ಪ್ರಜೆಯೊಬ್ಬರು ಇರುವ ಮಾಹಿತಿ ಅರಿತ ಅಧಿಕಾರಿಗಳು ಆ ವ್ಯಕ್ತಿ ಹಾಗೂ ಜೊತೆಗಿದ್ದ 18 ಮಂದಿಯನ್ನು ಭಾನುವಾರ ವಿಮಾನದಿಂದ ಕೆಳಗಿಳಿಸಿದ್ದಾರೆ.

ಸೋಂಕಿತ ವ್ಯಕ್ತಿ ಹಾಗೂ ಆತನ ಪತ್ನಿಯನ್ನು ಸಮೀಪದ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿರಿಸಲಾಗಿದೆ. ಉಳಿದ 17 ಮಂದಿಯನ್ನು ಪ್ರತ್ಯೇಕವಾಗಿ ನಿಗಾದಲ್ಲಿರಿಸಲಾಗಿದೆ ಎಂದು ಸಚಿವ ವಿ.ಎಸ್‌. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಸೋಂಕು ತಗುಲಿದ್ದ ವ್ಯಕ್ತಿಯನ್ನು ಮುನ್ನಾರ್‌ನ ರೆಸಾರ್ಟ್‌ನ ಪ್ರತ್ಯೇಕ ಕೊಠಡಿಯಲ್ಲಿರಿಸಲಾಗಿತ್ತು. ಅಲ್ಲಿಂದ ಅವರು ತಪ್ಪಿಸಿಕೊಂಡು ವಿಮಾನ ಹತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವಿಮಾನದಲ್ಲಿದ್ದ ಕೇರಳದ ಪ್ರಯಾ ಣಿಕರೊಬ್ಬರು ಕೂಡ ಪ್ರಯಾಣ ರದ್ದು ಮಾಡಿ ಪತ್ಯೇಕವಾಗಿರಲು ಒಪ್ಪಿಕೊಂಡಿ ದ್ದಾರೆ.ವಿಮಾನದಲ್ಲಿ ಒಟ್ಟು 270 ಮಂದಿ ಇದ್ದರು’ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿಯಿದ್ದ ರೆಸಾರ್ಟ್ ಅನ್ನು ಮುಚ್ಚಲಾಗಿದೆ. ಅಲ್ಲಿನ ಸಿಬ್ಬಂದಿ ಯನ್ನು ಪತ್ಯೇಕವಾಗಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸೋಂಕಿತ ವ್ಯಕ್ತಿ ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ರೆಸಾರ್ಟ್‌ ತೊರೆದಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು’ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT