ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಆರ್‌ಸಿಟಿಸಿ ವೆಬ್‌ಸೈಟ್ ಕ್ರ್ಯಾಶ್; ಸಂಜೆ 6 ಗಂಟೆಯ ನಂತರ ಆರಂಭವಾಯ್ತು ಬುಕಿಂಗ್

Last Updated 11 ಮೇ 2020, 15:59 IST
ಅಕ್ಷರ ಗಾತ್ರ

ನವದೆಹಲಿ:ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಂತೆಐಆರ್‌ಸಿಟಿಸಿ ವೆಬ್‌ಸೈಟ್ ದಿಢೀರ್ ಸ್ಥಗಿತಗೊಂಡಿದ್ದು, ಸಂಜೆ 6 ಗಂಟೆಯ ನಂತರ ಬುಕಿಂಗ್ ಆರಂಭವಾಗಿದೆ.

ಇವತ್ತು ಮಧ್ಯಾಹ್ನ ರೈಲು ಟಿಕೆಟ್ ಬುಕಿಂಗ್ ಸೇವೆ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾಗ ವೆಬ್‌ಸೈಟ್ ಕ್ರ್ಯಾಶ್ ಆಗಿರುವುದು ಗಮನಕ್ಕೆ ಬಂದಿದೆ ಎಂದು ರೈಲ್ವೆ ಇಲಾಖೆ ಹೇಳಿತ್ತು. ಸಂಜೆ 4 ಗಂಟೆಗೆ ಟಿಕೆಟ್ ಬುಕಿಂಗ್ ಆರಂಭವಾಗಬೇಕಿತ್ತು. ವೆಬ್‌ಸೈಟ್ ಕ್ರ್ಯಾಶ್ ಆದ ಕಾರಣ ಎರಡು ಗಂಟೆ ವಿಳಂಬವಾಗಿ ಬುಕಿಂಗ್ ಆರಂಭವಾಗಿದೆ.30 ವಿಶೇಷ ರೈಲು ಸೇವೆ ನಾಳೆ ಆರಂಭವಾಗಲಿದೆ.

ವೆಬ್‌ಸೈಟ್ ಕ್ರ್ಯಾಶ್ ಆಗಲು ಕಾರಣ ಏನು ಎಂಬುದನ್ನು ನಾವು ನೋಡುತ್ತಿದ್ದೇವೆ ಎಂದು ದೆಹಲಿಯಲ್ಲಿರುವ ಐಆರ್‌ಸಿಟಿಸಿ ಪ್ರಧಾನ ಕಚೇರಿಯಲ್ಲಿನ ಅಧಿಕಾರಿಯೊಬ್ಬರು ಹೇಳಿದ್ದರು ಭೇಟಿ ನೀಡುವವರ ಸಂಖ್ಯೆ ಜಾಸ್ತಿಯಾಗಿಯೋ ಅಥವಾ ಇನ್ನೇನಾದರೂ ಕಾರಣದಿಂದ ಈ ರೀತಿ ಆಗಿದೆಯೋ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ಇದಕ್ಕಿಂತ ಮುನ್ನ ಅತೀ ಹೆಚ್ಚು ಟ್ರಾಫಿಕ್‌ ಬಂದಾಗಲೂ ಈ ರೀತಿ ಆಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

ವೆಬ್‌ಸೈಟಿಗೆ ಭೇಟಿ ನೀಡುವವರೆಲ್ಲರೂ ಟಿಕೆಟ್ ಬುಕಿಂಗ್ ಮಾಡಲಿಕ್ಕೆಂದೇ ಬರುವುದಿಲ್ಲ, ವಿಶೇಷ ರೈಲುಗಳ ಸಂಚಾರ ಇದೆ ಎಂಬ ಸುದ್ದಿ ಕೇಳಿ ಬುಕಿಂಗ್ ಹೇಗೆ ನಡೆಯುತ್ತದೆ ಎಂಬುದನ್ನು ನೋಡಲು ಹಲವಾರು ಜನರು ಬಂದಿರುತ್ತಾರೆ. ಇದು ಕ್ರ್ಯಾಶ್‌ಗೆ ಕಾರಣವಾಗುತ್ತದೆ ಎಂದಿದ್ದಾರೆ ಅವರು.

ಸಂಜೆ 4.30ಕ್ಕೆ ಟ್ವೀಟ್ ಮಾಡಿದ ರೈಲ್ವೆ ಸಚಿವಾಲಯವು ಶೀಘ್ರದಲ್ಲಿಯೇ ಟಿಕೆಟ್ ಬುಕಿಂಗ್ ಸಾಧ್ಯವಾಗಲಿದೆ, ಸ್ವಲ್ಪ ಕಾಯಿರಿ, ಅಡಚಣೆಗಾಗಿ ಕ್ಷಮಿಸಿ ಎಂದು ಹೇಳಿತ್ತು

ಇದಾದ ನಂತರ ಟ್ವೀಟ್ ಮಾಡಿದ ಸಚಿವಾಲಯವುಭಾರತೀಯ ರೈಲ್ವೆಯಲ್ಲಿನ ಪ್ರಯಾಣಿಕರ ಸೇವೆಗಳನ್ನುಮೇ 12, 2020ರಂದುಭಾಗಶಃ ಪುನಃಸ್ಥಾಪಿಸಲಾಗುತ್ತದೆ.15 ನಗರಗಳಿಗೆ 15 ಜೋಡಿ ವಿಶೇಷ ರೈಲುಗಳನ್ನು ಸಂಚಾರ ನಡೆಸಲಿವೆ.ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಆನ್‌ಲೈನ್ ಇ-ಟಿಕೆಟಿಂಗ್ ಮಾತ್ರ ಮಾಡಲಾಗುತ್ತದೆ. ಲಗತ್ತಿಸಲಾದ ಪಟ್ಟಿಯನ್ನು ನೋಡಿ ಎಂದಿದೆ.

ವೆಬ್‍ಸೈಟ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೆಲವರು ಟ್ವಿಟರ್‌ನಲ್ಲಿ ಸಮಸ್ಯೆ ಹೇಳಿಕೊಂಡರೆ ಇನ್ನು ಕೆಲವರು ಮೀಮ್‌ಗಳ ಮೂಲಕ ತಮಾಷೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT