ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್‌ ವಾಯು ಪ್ರದೇಶ ಪ್ರವೇಶಿಸಿದ ಇಸ್ರೇಲ್‌ ವಿಮಾನ

Last Updated 17 ಫೆಬ್ರುವರಿ 2020, 19:59 IST
ಅಕ್ಷರ ಗಾತ್ರ

ಜೆರುಸಲೇಂ: ಇಸ್ರೇಲ್‌ಗೆ ಸೇರಿದ ವಿಮಾನವೊಂದು ಇದೇ ಮೊದಲ ಬಾರಿಸುಡಾನ್‌ ವಾಯು ಪ್ರದೇಶವನ್ನು ಹಾದುಹೋಗಿದೆ. ಇದನ್ನುಎರಡೂ ರಾಷ್ಟ್ರಗಳ ನಡುವೆ ಸಂಬಂಧ ವೃದ್ಧಿಗೊಂದು ಉದಾಹರಣೆ ಎಂದುಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಬಣ್ಣಿಸಿದ್ದಾರೆ.

ವಿಮಾನವು ‘ಖಾಸಗಿ ಜೆಟ್‌’ ಎಂದು ಸರ್ಕಾರವು ದೃಢಪಡಿಸಿರುವುದಾಗಿ ಇಸ್ರೇಲ್‌ನ ಪತ್ರಿಕೆ ‘ಹಾರೆಟ್ಜ್‌’ ವರದಿ ಮಾಡಿದೆ.

ಎರಡು ವಾರಗಳ ಹಿಂದೆಯಷ್ಟೇ ನೆತನ್ಯಾಹು ಅವರು, ಸುಡಾನ್‌ನ ನಾಯಕ ಅಬ್ದೆಲ್‌ ಫತಾ ಅಲ್‌ ಬುರಾನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸುಡಾನ್‌, ಅರಬ್‌ ಒಕ್ಕೂಟದಲ್ಲಿ ಗುರುತಿಸಿಕೊಂಡಿದ್ದು, ದಶಕಗಳಿಂದ ಇಸ್ರೇಲ್‌ ಅನ್ನು ವಿರೋಧಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT