ನಮ್ಮಿಬ್ಬರದು ಸಹಮತದ ಸಂಬಂಧ: ಎಂ.ಜೆ. ಅಕ್ಬರ್ ಸ್ಪಷ್ಟನೆ

7

ನಮ್ಮಿಬ್ಬರದು ಸಹಮತದ ಸಂಬಂಧ: ಎಂ.ಜೆ. ಅಕ್ಬರ್ ಸ್ಪಷ್ಟನೆ

Published:
Updated:

ಬೆಂಗಳೂರು: ಭಾರತ ಸಂಜಾತೆ ಪತ್ರಕರ್ತೆ ಪಲ್ಲವಿ ಗೊಗೊಯ್ ಅವರು ಮಾಡಿರುವ ಅತ್ಯಾಚಾರದ ಆರೋಪವನ್ನು ಮಾಜಿ ಸಚಿವ ಮತ್ತು ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ತಳ್ಳಿಹಾಕಿದ್ದಾರೆ.

ಇದಕ್ಕೆ ಸ್ಪಷ್ಟನೆ ನೀಡಿದ ಅಕ್ಬರ್, ‘ನಮ್ಮಿಬ್ಬರದು ಸಹಮತದ ಸಂಬಂಧ. ನಾವಿಬ್ಬರು ಕೆಲವು ತಿಂಗಳ ಕಾಲ ಜೊತೆಗಿದ್ದೆವು. ಇದು ನನ್ನ ಸಾಂಸರಿಕ ಜೀವನದಲ್ಲಿ ಕೋಲಾಹಲ ಎಬ್ಬಿಸಿತ್ತು’ ಎಂದು ಹೇಳಿದ್ದಾರೆ. 

ಅಲ್ಲದೇ ಅಕ್ಬರ್ ಪತ್ನಿ ಮಲ್ಲಿಕಾ ಅಕ್ಬರ್ ಇದೇ ಮೊದಲ ಬಾರಿಗೆ ಇವರ ಮೇಲೆ ಬಂದಿರುವ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಮೌನ ಮುರಿದಿದ್ದು, ‘ಪಲ್ಲವಿ ಮತ್ತು ತನ್ನ ಪತಿಯ ಸಂಬಂಧ ಒಪ್ಪಿತವಾದುದು. 20 ವರ್ಷಗಳ ಹಿಂದೆ ಪಲ್ಲವಿ ಅವರು ನಮ್ಮ ಮನೆಯ ದುಃಖಕ್ಕೆ ಕಾರಣರಾದವರು’ ಎಂದು ದೂರಿದ್ದಾರೆ. 

ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ವಿರುದ್ಧ ಮತ್ತೋರ್ವ ಮಹಿಳೆಯ ಅತ್ಯಾಚಾರದ ಆರೋಪ ಮಾಡಿದ್ದಾರೆ. ‘ಒಂದು ದೊಡ್ಡ ಪತ್ರಿಕೆಯ ಸಂಪಾದಕರಾಗಿದ್ದ ಎಂ.ಜಿ.ಅಕ್ಬರ್ ತಮ್ಮ ಸ್ಥಾನ ದುರುಪಯೋಗಪಡಿಸಿಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು’ ಎಂದು ಪಲ್ಲವಿ ಅವರು ಈ ಹಿಂದೆ ನಡೆದಿದ್ದ ವೃತ್ತಾಂತವನ್ನು ಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ...
ಎಂ.ಜೆ.ಅಕ್ಬರ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ ಪತ್ರಕರ್ತೆ ಪಲ್ಲವಿ ಗೊಗೊಯ್

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !