ಇಂದಿರಾ ಗಾಂಧಿ ಮರಳಿ ಬಂದಂತಾಗಿದೆ: ಕಾಂಗ್ರೆಸ್ ಕಾರ್ಯಕರ್ತರು

7

ಇಂದಿರಾ ಗಾಂಧಿ ಮರಳಿ ಬಂದಂತಾಗಿದೆ: ಕಾಂಗ್ರೆಸ್ ಕಾರ್ಯಕರ್ತರು

Published:
Updated:

ನವದೆಹಲಿ: ಉತ್ತರ ಪ್ರದೇಶದಲ್ಲಿ ರೋಡ್ ಶೋ ನಡೆಸುವ ಮೂಲಕ ಪ್ರಿಯಾಂಕಾ ಗಾಂಧಿ  ವಾದ್ರಾ ಸಕ್ರಿಯ ರಾಜಕಾರಣಕ್ಕಿಳಿದ್ದಾರೆ.

ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಹೊಣೆ ಹೊತ್ತ ನಂತರ ಲಖನೌದಲ್ಲಿ ರೋಡ್ ಶೋ ನಡೆಸಿರುವ 47 ರ ಹರೆಯದ ಪ್ರಿಯಾಂಕಾಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಅಭೂತಪೂರ್ವ ಸ್ವಾಗತ ಲಭಿಸಿದೆ.

ಇಂದಿರಾ ಗಾಂಧಿ ಮರಳಿ ಬಂದಂತಾಗಿದೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಬೆಂಬಲಿಗ ಫೈಜಲ್ ಅಹಮದ್ ಖಾನ್ ಹೇಳಿದ್ದಾರೆ.  ಈ ರಾಜ್ಯದ ರೈತರು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಸ್ಥಾನದಲ್ಲಿಯೂ  ಪ್ರಿಯಾಂಕಾ ಗಾಂಧಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿಯೂ ಕಾಣಲು ಬಯಸಿದ್ದಾರೆ ಎಂದು ಫೈಜಲ್ ಹೇಳಿದ್ದಾರೆ.

ಅವಳನ್ನು ಜಾಗ್ರತೆಯಿಂದ ನೋಡಿಕೊಳ್ಳಿ
ಉತ್ತರ ಪ್ರದೇಶದಲ್ಲಿ ರೋಡ್ ಶೋ ನಡೆಸುತ್ತಿರುವ ನನ್ನ  ಉತ್ತಮ ಗೆಳತಿ, ಪರ್ಫೆಕ್ಟ್ ಪತ್ನಿ ಮತ್ತು ನನ್ನ ಮಕ್ಕಳ ಉತ್ತಮ ತಾಯಿಯನ್ನು ಜಾಗ್ರತೆಯಿಂದ ನೋಡಿಕೊಳ್ಳಿ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರೋಬರ್ಟ್ ವಾದ್ರಾ ಅವರು ಉತ್ತರ ಪ್ರದೇಶದ ಜನರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ

ಚೌಕೀದಾರ್ ಚೋರ್ ಹೈ, ನಾವು ಮುಂದಿಟ್ಟ ಹೆಜ್ಜೆ ಹಿಂದಿಡಲಾರೆವು: ರಾಹುಲ್ ಗಾಂಧಿ

ಉತ್ತರ ಪ್ರದೇಶದಲ್ಲಿ ರಾಹುಲ್ ಜತೆ ಪ್ರಿಯಾಂಕಾ ಗಾಂಧಿ ರೋಡ್ ಶೋ

ದುರ್ಗಾವತಾರದಲ್ಲಿ ಪ್ರಿಯಾಂಕಾ ಪೋಸ್ಟರ್

 

ಬರಹ ಇಷ್ಟವಾಯಿತೆ?

 • 11

  Happy
 • 3

  Amused
 • 1

  Sad
 • 0

  Frustrated
 • 10

  Angry

Comments:

0 comments

Write the first review for this !