ಗುರುವಾರ , ಏಪ್ರಿಲ್ 2, 2020
19 °C
ಅನಿತಾ ಡೋಂಗ್ರೆ ವಿನ್ಯಾಸದ ಉಡುಗೆ

ಶೇರ್ವಾನಿಯಲ್ಲಿ ಮಿಂಚಿದ ಇವಾಂಕಾ ಟ್ರಂಪ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗಳು ಇವಾಂಕಾ ಟ್ರಂಪ್ ಮಂಗಳವಾರ ಭಾರತೀಯ ಉಡುಗೆ ಶೇರ್ವಾನಿ ಧರಿಸಿ ಗಮನ ಸೆಳೆದರು.

ಭಾರತದ ವಸ್ತ್ರವಿನ್ಯಾಸಕಿ ಅನಿತಾ ಡೋಂಗ್ರೆ ವಿನ್ಯಾಸ ಮಾಡಿದ್ದ ಬಿಳಿಬಣ್ಣದ ರೇಷ್ಮೆ ಶೇರ್ವಾನಿ ಧರಿಸಿದ್ದ ಇವಾಂಕಾ, ರಾಷ್ಟ್ರಪತಿ ಭವನದಲ್ಲಿ ನಡೆದ ಅಮೆರಿಕ ಅಧ್ಯಕ್ಷರ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡರು.

ಇವಾಂಕಾ ಧರಿಸಿದ್ದ ಶೇರ್ವಾನಿಯನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ರೇಷ್ಮೆಯಿಂದ ವಿನ್ಯಾಸ ಮಾಡಲಾಗಿದೆ.

‘ಶೇರ್ವಾನಿ ಕಾಲಾತೀತ ಉಡುಗೆಯಾಗಿದ್ದು, ಈ ವಿನ್ಯಾಸವನ್ನು ಇಪ್ಪತ್ತು ವರ್ಷಗಳ ಹಿಂದೆ ಮಾಡಿದ್ದೆವು. ಆದರೂ, ಇದು ತನ್ನ ಅದ್ಭುತ ವಿನ್ಯಾಸದಿಂದ ಇಂದಿಗೂ ಸೂಕ್ತವಾಗಿದೆ. ಶೇರ್ವಾನಿ ಇಂದಿಗೂ ಅದೇ ಆಕರ್ಷಣೆ  ಮತ್ತು ವರ್ಚಸ್ಸು ಉಳಿಸಿಕೊಂಡಿದೆ’ ಎಂದು ವಸ್ತ್ರವಿನ್ಯಾಸಕಿ ಅನಿತಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು