ಸೋಮವಾರ, ಏಪ್ರಿಲ್ 6, 2020
19 °C

ನಮಸ್ತೆ ಟ್ರಂಪ್ ಅದ್ಭುತ ಕಾರ್ಯಕ್ರಮ: ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಅತ್ಯದ್ಭುತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ, ಸಲಹೆಗಾರ್ತಿಯೂ ಆಗಿರುವ ಇವಾಂಕಾ ಟ್ರಂಪ್ ಬಣ್ಣಿಸಿದ್ದಾರೆ.

ಕಾರ್ಯಕ್ರಮ ಹೇಗಿತ್ತು ಎಂದು ಕೇಳಲಾದ ಪ್ರಶ್ನೆಗೆ, ‘ಅತ್ಯದ್ಭುತವಾಗಿತ್ತು’ ಎಂದು ಇವಾಂಕಾ ಪ್ರತಿಕ್ರಿಯಿಸಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಎರಡು ದಿನಗಳ ಭಾರತ ಭೇಟಿಯಲ್ಲಿರುವ ಟ್ರಂಪ್ ಮತ್ತು ನಿಯೋಗಕ್ಕೆ ಅಹಮದಾಬಾದ್‌ನಲ್ಲಿ ಸೋಮವಾರ ಬೆಳಿಗ್ಗೆ ಭರ್ಜರಿ ಸ್ವಾಗತ ದೊರೆತಿತ್ತು. ಬಳಿಕ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದರು. ಜತೆಗೆ, ‘ಅಮೆರಿಕ ಭಾರತವನ್ನು ಗೌರವಿಸುತ್ತದೆ, ಪ್ರೀತಿಸುತ್ತದೆ ಹಾಗೂ ಎಂದೆಂದಿಗೂ ಭಾರತದ ವಿಶ್ವಾಸಿ ಸ್ನೇಹಿತನಾಗಿರುತ್ತದೆ’ ಎಂದು ಹೇಳಿದ್ದರು.

ತಾಜ್‌ ಮಹಲ್‌ನಲ್ಲಿ ಪತಿ ಜತೆ ವಿಹಾರ: ಅಧ್ಯಕ್ಷರ ಜತೆ ಇವಾಂಕಾ ಟ್ರಂಪ್ ಮತ್ತು ಅವರ ಪತಿ ಜಾರೆಡ್ ಕುಶ್ನರ್ ಸಹ ತಾಜ್‌ ಮಹಲ್ ವೀಕ್ಷಿಸಿದ್ದಾರೆ. ತಾಜ್‌ ಮಹಲ್ ಆವರಣದಲ್ಲಿ ವಿಹರಿಸಿದ ಅವರು ಹಲವು ಪತಿ ಜತೆ ಫೋಟೊಗೂ ಪೋಸ್ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು