ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗನ್‌ ಸೋದರಮಾವ ಸುಬ್ಬಾರೆಡ್ಡಿ ಟಿಟಿಡಿ ಅಧ್ಯಕ್ಷ

Last Updated 23 ಜೂನ್ 2019, 11:52 IST
ಅಕ್ಷರ ಗಾತ್ರ

ಅಮರಾವತಿ: ತಿರುಪತಿ ಶ್ರೀನಿವಾಸ ದೇಗುಲವೂ ಸೇರಿದಂತೆ ದೇಶದ ಹಲವು ಪ್ರಮುಖ ದೇಗುಲಗಳ ಆಡಳಿತ ನಿರ್ವಹಿಸುವ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಮ್) ಆಡಳಿತ ಮಂಡಳಿಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸೋದರಮಾವಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ವೈ.ವಿ.ಸುಬ್ಬಾರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ವೈ.ವಿ.ಸುಬ್ಬಾರೆಡ್ಡಿ
ವೈ.ವಿ.ಸುಬ್ಬಾರೆಡ್ಡಿ

ನೇಮಕಾತಿಗೆ ಸಂಬಂಧಿಸಿದಂತೆವಿಶೇಷ ಪ್ರಧಾನ ಕಾರ್ಯದರ್ಶಿ ಮನಮೋಹನ್ ಸಿಂಗ್ ಅವರು ಈ ಸಂಬಂಧ ಸರ್ಕಾರಿ ಆದೇಶ (ಜಿಒ) ಹೊರಡಿಸಿದ್ದಾರೆ.ವೈಎಸ್‌ಆರ್‌ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸುಬ್ಬಾರೆಡ್ಡಿ ಟಿಟಿಡಿ ಅಧ್ಯಕ್ಷರಾಗಿ ಇಂದು (ಜೂನ್ 22) ಅಧಿಕಾರ ಸ್ವೀಕರಿಸಲಿದ್ದಾರೆ.

ಟಿಟಿಡಿ ಮಂಡಳಿಯ ಇತರ ಸದಸ್ಯರನ್ನೂ ಶೀಘ್ರ ನೇಮಿಸಲಾಗುವುದು ಎಂದು ಸಿಂಗ್ ಹೇಳಿದ್ದಾರೆ. ಟಿಟಿಡಿ ಅಧ್ಯಕ್ಷರಿಗೆ ಆಂಧ್ರದಲ್ಲಿ ಸಂಪುಟದ ದರ್ಜೆ ಸ್ಥಾನಮಾನವಿದ್ದು, ಪ್ರತಿಷ್ಠಿತ ಹುದ್ದೆ ಎನಿಸಿಕೊಂಡಿದೆ.

ವೈ.ವಿ.ಸುಬ್ಬಾರೆಡ್ಡಿ ಅವರನ್ನು ಟಿಟಿಡಿ ಮಂಡಳಿಗೆ ನೇಮಿಸಲು ಜಗನ್ ಮೋಹನ್ ರೆಡ್ಡಿ ಒಲವು ತೋರಿಸಿದ ನಂತರ ‘ಸುಬ್ಬಾರೆಡ್ಡಿ ಓರ್ವ ಕ್ರಿಶ್ಚಿಯನ್. ಅವರಿಗೆ ಟಿಟಿಡಿ ಅಧ್ಯಕ್ಷ ಸ್ಥಾನ ನೀಡಬಾರದು’ ಎಂದು ಹಲವರು ತಗಾದೆ ತೆಗೆದಿದ್ದರು. ‘ನಾನು ಹಿಂದೂ’ ಎಂದು ಸುಬ್ಬಾರೆಡ್ಡಿ ತಮ್ಮ ಮೇಲಿನ ಆಪಾದನೆಗಳನ್ನು ತಳ್ಳಿ ಹಾಕಿದ್ದರು.

ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟಿಟಿಡಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಪುಟ್ಟ ಸುಧಾಕರ ಯಾದವ್ಈಚೆಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಸುಬ್ಬಾರೆಡ್ಡಿ ಹಾದಿಯನ್ನು ಸುಗಮಗೊಳಿಸಿತ್ತು. ಇನ್ನು ನಾಲ್ಕು ದಿನಗಳ ಒಳಗೆ ಉಳಿದ ಸದಸ್ಯರ ನೇಮಕಾತಿ ಪೂರ್ಣಗೊಳಿಸಲಾಗುವುದು ಎಂದು ವೈಎಸ್‌ಆರ್ ಮೂಲಗಳನ್ನು ಉಲ್ಲೇಖಿಸಿ ಆಂಧ್ರದ ಮಾಧ್ಯಮಗಳು ವರದಿ ಮಾಡಿವೆ.

ಮಂಡಳಿಯಲ್ಲಿ ಸುಧಾಮೂರ್ತಿ ಇರ್ತಾರಾ?

ಇನ್‌ಫೋಸಿಸ್ ಫೌಂಡೇಷನ್ ಅಧ್ಯಕ್ಷೆ, ಕನ್ನಡತಿ ಸುಧಾ ಮೂರ್ತಿ ಎರಡು ಬಾರಿ ಟಿಟಿಡಿ ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಬಾರಿಅವರನ್ನು ಆಂಧ್ರದ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುನೇಮಿಸಿದ್ದರು. ಆಂಧ್ರದಲ್ಲಿ ರಾಜಕೀಯ ಪಲ್ಲಟಗಳು ಸಂಭವಿಸಿ, ರಾಜ್ಯ ಸರ್ಕಾರ ಬದಲಾದ ನಂತರ ಸುಧಾಮೂರ್ತಿ ಜೂನ್ 6ರಂದು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

‘ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತಮ್ಮ ಚಿಕ್ಕಪ್ಪ ಸುಬ್ಬಾರೆಡ್ಡಿ ಅವರನ್ನು ಟಿಟಿಡಿ ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದ್ದೇ ಸುಧಾಮೂರ್ತಿ ರಾಜೀನಾಮೆಗೆ ಕಾರಣ. ಓರ್ವ ಕ್ರಿಶ್ಚಿಯನ್ ಟಿಟಿಡಿ ಅಧ್ಯಕ್ಷರಾಗುವುದನ್ನು ವಿರೋಧಿಸಿ ಸುಧಾಮೂರ್ತಿ ರಾಜೀನಾಮೆ ನೀಡಿದ್ದಾರೆ’ ಎಂಬರ್ಥದ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದವು. ಆದರೆ ‘ದಿ ನ್ಯೂಸ್ ಮಿನಟ್’ಜಾಲತಾಣಕ್ಕೆ ಈ ಸಂಬಂಧ ಪ್ರತಿಕ್ರಿಯಿಸಿದ್ದ ಸುಧಾಮೂರ್ತಿ, ಇಂಥ ಪೋಸ್ಟ್‌ಗಳು ಆಧಾರರಹಿತ ಎಂದು ತಳ್ಳಿಹಾಕಿದ್ದರು.

‘ನನ್ನನ್ನು ಹಿಂದಿನ ಸರ್ಕಾರ ನೇಮಿಸಿತ್ತು. ಸರ್ಕಾರ ಬದಲಾವಣೆಯಾದ ನಂತರ ನಾನು ಟಿಟಿಡಿ ಮಂಡಳಿ ಸದಸ್ಯೆಯಾಗಿ ಉಳಿಯುವುದು ಸರಿಯಲ್ಲ ಎನಿಸಿ ರಾಜೀನಾಮೆ ಕೊಟ್ಟೆ. ಯಾವುದೇ ರಾಜಕೀಯ ಪ್ರೇರಣೆಯಿಂದ ನಾನು ಈ ನಿರ್ಧಾರ ತೆಗೆದುಕೊಂಡಿಲ್ಲ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಹ್ವಾನಿಸಿದರೆ ಖಂಡಿತ ಮತ್ತೆ ಸದಸ್ಯೆಯಾಗಿ ಮುಂದುವರಿಯುವೆ’ ಎಂದು ಸುಧಾಮೂರ್ತಿ ಸ್ಪಷ್ಟಪಡಿಸಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT