ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮ್ ಘೋಷಣೆ ಭಾರತ ಬಿಟ್ಟು ಪಾಕಿಸ್ತಾನದಲ್ಲಿ ಕೂಗಲು ಸಾಧ್ಯವೇ? ಅಮಿತ್ ಶಾ

Last Updated 7 ಮೇ 2019, 12:21 IST
ಅಕ್ಷರ ಗಾತ್ರ

ಘತಾಲ್: ಜೈಶ್ರೀರಾಮ್ ಘೋಷಣೆ ಕೂಗಿದ ಗುಂಪಿನ ಮೇಲೆ ಕೂಗಾಡಿರುವಪಶ್ಚಿಮ ಬಂಗಾಳ ಮುಖ್ಯಮಂತ್ರಿಮಮತಾ ಬ್ಯಾನರ್ಜಿ ಅವರ ವರ್ತನೆಯನ್ನು ಖಂಡಿಸಿದಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ.

ಮಮತಾ ಅವರು ಗುಂಪಿನ ಮೇಲೆ ಕೂಗಾಡಿರುವ ವಿಡಿಯೊ ವೈರಲ್ ಆಗಿತ್ತು.

ಪಶ್ಚಿಮ ಬಂಗಾಳದ ಘತಾಲ್‌ನಲ್ಲಿನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಜೈ ಶ್ರೀರಾಮ್ ಘೋಷಣೆಯನ್ನು ಭಾರತದಲ್ಲಿ ಕೂಗದೆ ಪಾಕಿಸ್ತಾನದಲ್ಲಿ ಕೂಗಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಇಲ್ಲಿನ 42 ಲೋಕಸಭಾ ಕ್ಷೇತ್ರಗಳ ಪೈಕಿ 23 ಸ್ಥಾನಗಳನ್ನು ಗೆದ್ದು ಪಾರುಪತ್ಯ ಸ್ಥಾಪಿಸಲಿದೆ ಎಂದು ಹೇಳಿದರು.

ಶ್ರೀರಾಮ ನಮ್ಮ ಸಂಸ್ಕೃತಿಯ ಭಾಗ. ಈತನ ನಾಮಧೇಯದ ಉಚ್ಛಾರವನ್ನು ಯಾರಾದರೂ ನಿಲ್ಲಿಸಲು ಸಾಧ್ಯವೇ? ರಾಮನ ಹೆಸರನ್ನು ಭಾರತದಲ್ಲಿ ಉಚ್ಛರಿಸದೆ ಪಾಕಿಸ್ತಾನದಲ್ಲಿ ಉಚ್ಛರಿಸಲು ಸಾಧ್ಯವೇ ಎಂದು ದೀದೀ ಅವರನ್ನು ಕೇಳಬೇಕಾಗಿದೆ ಎಂದರು.

ಕಳೆದ ಐದು ವರ್ಷಗಳಿಂದ ಬಿಜೆಪಿ ಸರ್ಕಾರ ಪಶ್ಚಿಮ ಬಂಗಾಳಕ್ಕೆ ₹4,24,800 ಕೋಟಿ ಹಣ ವ್ಯಯಮಾಡಿದೆ. ಆದರೆ ಇದು ಜನರನ್ನು ತಲುಪಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಕಾಲಾವಧಿಯಲ್ಲಿ ಯುಪಿಎ ಸರ್ಕಾರ ₹1,32,000 ಕೋಟಿ ಮಾತ್ರ ನೀಡಿತ್ತು ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT