ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಭುತ ದೃಶ್ಯಕಾವ್ಯ| ಲಾಕ್ ಡೌನ್‌ನಿಂದ ದೂರದ ದೌಲಾಧಾರ್ ಪರ್ವತ ಶ್ರೇಣಿ ಕಂಡ ಜನ..

Last Updated 4 ಏಪ್ರಿಲ್ 2020, 12:53 IST
ಅಕ್ಷರ ಗಾತ್ರ
ADVERTISEMENT
""

ಜಲಂಧರ್ (ಪಂಜಾಬ್): ಅದ್ಭುತ ದೃಶ್ಯಕಾವ್ಯ, ಹಿಮವನ್ನೇ ಹೊದ್ದು ಕುಳಿತ ಪರ್ವತ ಶ್ರೇಣಿ, ನೀಲಾಕಾಶ, ಮೌನವೇ ಆವರಿಸಿರುವ ನಗರ, ತಂಪಾದ ಗಾಳಿ, ಖಾಲಿಖಾಲಿಯಾಗಿ ವಾಹನದ ಸದ್ದಿಲ್ಲದೆ ನಿಶ್ಯಬ್ಧ ತುಂಬಿದ ರಸ್ತೆಗಳು...

ಕೊರೊನಾವೈರಸ್‌ನಿಂದಾಗಿ ಲಾಕ್ಡೌನ್ ಯಾರಿಗೆ ಏನೇನೋ ತೊಂದರೆ ತಂದಿದೆಯೋ ತಿಳಿಯದು. ಆದರೆ, ಪಂಜಾಬ್‌ನ ಜಲಂಧರ್ ಜನರಿಗೆ ಮಾತ್ರ ಪ್ರಕೃತಿ ಸೌಂದರ್ಯ ಸವಿಯುವ ಸುವರ್ಣಾವಕಾಶ ಒದಗಿಸಿಕೊಟ್ಟಿದೆ.

ಹೌದು, ಮೇಲಿನ ಚಿತ್ರವನ್ನು ನೋಡಿದರೆ ಇದೊಂದು ಹಿಮಚ್ಛಾದಿತ ಪರ್ವತಗಳಸಾಲು ಎಂಬುದಷ್ಟೇ ಕಾಣುತ್ತದೆ. ಆದರೆ, 213 ಕಿಲೋ ಮೀಟರ್ ದೂರದ ಹಿಮಾಚಲ ಪ್ರದೇಶದ ದೌಲಾಧಾರ್ ಎಲ್ಲಿ, ಪಂಜಾಬ್‌ನ ದೇವನಗರಿ ಜಲಂಧರ್ ಎಲ್ಲಿ. ಈ ದೃಶ್ಯಕಾವ್ಯವನ್ನು ಸೆರೆಹಿಡಿದಿದ್ದು, ಪಂಜಾಬ್ ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ್ ಕುಮಾರ್ ಕಸ್ವಾನ್.

ಇವರು ಟ್ವೀಟ್ ಏಪ್ರಿಲ್ 3 ರಂದು ಟ್ವೀಟ್ ಮಾಡಿ, ಅಬ್ಬಾ ವಾಯುಮಾಲಿನ್ಯ ನಮ್ಮನ್ನು ಕುರುಡರನ್ನಾಗಿ ಮಾಡಿದೆ. ದೌಲಾಧಾರ್‌ನ ಪರ್ವತದ ಸಾಲುಗಳು ಇಷ್ಟೊಂದು ಸುಂದರವಾಗಿ ಹಿಂದೆಂದೂ ಕಂಡಿರಲಿಲ್ಲ. ಇದಕ್ಕೆ ಕಾರಣ ವಾಯು ಮಾಲಿನ್ಯ. ಇಂತಹ ಪರ್ವತಗಳನ್ನು ಲಾಕ್ ಡೌನ್ ಆಗಿದ್ದರಿಂದ ವಾಯುಮಾಲಿನ್ಯ ಇಲ್ಲದ ಕಾರಣ ನಮ್ಮ ಕಣ್ಣಿನಿಂದ ನೋಡುವ ಭಾಗ್ಯ ಬಂದಿದೆ. ಇದೇ ಮೊದಲ ಬಾರಿಗೆ ಜಲಂಧರ್ ನಿಂದ 213 ಕಿಲೋಮೀಟರ್ ದಲ್ಲಿರುವ ದೌಲಾಧರ್ ಪರ್ವತ ಶ್ರೇಣಿಯನ್ನು ನೋಡುವಂತಾಗಿದೆ ಎಂದು ವಿವರಿಸಿದ್ದಾರೆ.

ಪ್ರವೀಣ್ ಕುಮಾರ್ ಅವರು ಇನ್ನೊಂದು ಫೋಟೋ ಟ್ವೀಟ್ ಮಾಡಿದ್ದು, ಉತ್ತಮ ಕ್ಯಾಪ್ಷನ್ ಕೊಡುವಂತೆ ತಿಳಿಸಿದ್ದಾರೆ.

ಈ ಚಿತ್ರ ಮತ್ತು ವಿವರಣೆಗೆ ಟ್ವಿಟರ್‌‌ನಲ್ಲಿಸಿಕ್ಕಾಪಟ್ಟೆ ರೆಸ್ಪಾನ್ಸ್ ದೊರೆತಿದ್ದು, ಸಾಕಷ್ಟು ಮಂದಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಜಲಂಧರ್‌ನಿವಾಸಿಗಳಂತೂ ಇಂತಹ ಅದ್ಭುತವನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಮನೆಯಿಂದಲೂ ಒಂದು ಫೋಟೋ ತೆಗೆದು ಟ್ವೀಟ್ ಮಾಡಿ ಅದ್ಬುತ ರಮಣೀಯ ದೃಶ್ಯ ಎಂದು ವರ್ಣಿಸಿದ್ದಾರೆ. ಇದು ಲಾಕ್ ಡೌನ್‌‌ನಿಂದಾಗಿ ಇಂತಹ ದೃಶ್ಯ ನಮ್ಮ ಕಣ್ಣಿಗೆ ಕಂಡಿದೆ. ಇಲ್ಲದಿದ್ದರೆ, ಇದು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ. ನಾವೇ ಸೃಷ್ಟಿ ಮಾಡಿದ ವಾಯುಮಾಲಿನ್ಯದಿಂದ ಇಂತಹ ಎಡವಟ್ಟುಗಳಾಗುತ್ತಿವೆ. ನಾವು ನಮ್ಮ ಭೂಮಿತಾಯಿಗೆ ಕೆಡುಕು ಮಾಡುತ್ತಿದ್ದೇವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT