ಶನಿವಾರ, ಜೂಲೈ 11, 2020
29 °C
JNU strongly advises students stranded in hostels to return to their native places

ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಮನೆಗೆ ಮರಳಲು ಜೆಎನ್‌ಯು ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಾಸ್ಟೆಲ್‌ಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವಿಶೇಷ ರೈಲು ಮತ್ತು ಅಂತರ ರಾಜ್ಯ ಬಸ್‌ಗಳ ಮೂಲಕ ತಮ್ಮ ಊರುಗಳಿಗೆ ಹಿಂತಿರುಗಬೇಕೆಂದು ಜವಾಹರಲಾಲ್ ವಿಶ್ವವಿದ್ಯಾಲಯ (ಜೆಎನ್‌ಯು) ಸೋಮವಾರ ಸಲಹೆ ನೀಡಿದೆ. 

ವಿಶ್ವವಿದ್ಯಾಲಯವನ್ನು ಮುಚ್ಚುವ ಕುರಿತು ಹಾಗೂ ವಿದ್ಯಾರ್ಥಿಗಳು ಮನೆಗೆ ಮರಳುವ ಬಗ್ಗೆ ವಿಶ್ವವಿದ್ಯಾಲಯವು ಮಾರ್ಚ್‌ನಲ್ಲೇ ಸುತ್ತೋಲೆ ಹೊರಡಿಸಿದೆ ಎಂದು ಡೀನ್ ಆಫ್ ಸ್ಟೂಡೆಂಟ್ಸ್ ಪ್ರೊಫೆಸರ್ ಸುಧೀರ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. 

‘ಲಾಕ್‌ಡೌನ್‌ ಇದ್ದುದ್ದರಿಂದ ಆ ಸಮಯದಲ್ಲಿ ಸಾರ್ವಜನಿಕೆ ಸಾರಿಗೆ ಇರಲಿಲ್ಲ. ಹೀಗಾಗಿ ಅನೇಕ ವಿದ್ಯಾರ್ಥಿಗಳು ಪುನಃ ಹಾಸ್ಟೆಲ್‌ನಲ್ಲೇ ಉಳಿಯುವುದಾಗಿ ಮನವಿ ಮಾಡಿಕೊಂಡಿದ್ದರು. ಆದರೆ, ಇತ್ತೀಚಿಗೆ ಲಾಕ್‌ಡೌನ್ ನಿರ್ಬಂಧ ತುಸು ಸಡಿಲ ಗೊಂಡಿದ್ದು,  ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಜೂನ್ 1ರಿಂದ ಸುಮಾರು 200ಕ್ಕೂ ಹೆಚ್ಚು ರೈಲುಗಳ ಸಂಚಾರ ಆರಂಭವಾಗಲಿದೆ. ಅಂತರರಾಜ್ಯ ಬಸ್, ಟ್ಯಾಕ್ಸಿ ಸೇವೆಗಳನ್ನೂ ಸರ್ಕಾರ ಆರಂಭಿಸಲಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಹಿಂತಿರುಗಬೇಕೆಂದು’ ಸಿಂಗ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. 

‘ಗೃಹ ಸಚಿವಾಲಯ ಮತ್ತು ದೆಹಲಿ ಸರ್ಕಾರದ ಸೂಚನೆಯ ಮೇರೆಗೆ ಜೂನ್ 25ರ ತನಕ ಕ್ಯಾಂಪಸ್ ಅನ್ನು ಮುಚ್ಚಲಾಗುವುದು. 25ರ ನಂತರ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಮರಳಬಹುದು’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು