ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಶಿವಸೇನೆ ಸೇರ್ಪಡೆಗೆ ಹಲವರ ಒಲವು?

Last Updated 25 ಜುಲೈ 2019, 19:41 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಹತ್ತಿರವಾದಂತೆ, ಪಕ್ಷಗಳಿಗೆ ವಲಸೆ ಪ್ರಕ್ರಿಯೆಯೂ ಚುರುಕು ಪಡೆಯುತ್ತಿದೆ. ಆಡಳಿತರೂಡ ಬಿಜೆಪಿ–ಶಿವಸೇನೆ ಕಡೆಗೆ ಕಾಂಗ್ರೆಸ್ ಮತ್ತು ಎನ್‌ಸಿಪಿಯಿಂದ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ.

ಉಭಯ ಪಕ್ಷಗಳಿಂದ ಸುಮಾರು ಒಂದು ಡಜನ್‌ನಷ್ಟು ನಾಯಕರು ಬರುವ ದಿನಗಳಲ್ಲಿ ಬಿಜೆಪಿ ಅಥವಾ ಶಿವಸೇನೆ ಸೇರುವ ಸಂಭವವಿದೆ. ಈ ಪಟ್ಟಿಯಲ್ಲಿ ರಾಜ್ಯದಲ್ಲಿ 15 ವರ್ಷ ಅಧಿಕಾರದಲ್ಲಿದ್ದ ಮೈತ್ರಿಕೂಟದಲ್ಲಿ ಸಚಿವರಾಗಿದ್ದವರೂ ಇದ್ದಾರೆ.

ಹಾಲಿ ಶಾಸಕರು, ಮಾಜಿ ಸಚಿವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ, ಜಲಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌, ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ, ಅವರ ಪುತ್ರ ಆದಿತ್ಯ ಠಾಕ್ರೆ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ–ಶಿವಸೇನಾ ಶಿಬಿರದ ಮೂಲಗಳು ತಿಳಿಸಿವೆ.

ಶಿವಸೇನೆಗೆ ಸೇರ್ಪಡೆ: ಈ ನಡುವೆ, ಶರದ್‌ ಪವಾರ್ ನೇತೃತ್ವದ ಎನ್‌ಸಿಪಿಯ ಹಿರಿಯ ನಾಯಕ, ಮುಂಬೈ ಘಟಕದ ಅಧ್ಯಕ್ಷ ಸಚಿನ್‌ ಅಹಿರ್‌ ಗುರುವಾರ ಶಿವಸೇನೆಗೆ ಸೇರ್ಪಡೆಯಾದರು.

ಬಾಂದ್ರಾದಲ್ಲಿನ ತಮ್ಮ ನಿವಾಸ ಮಾತೋಶ್ರಿಯಲ್ಲಿ ಇವರನ್ನು ಉದ್ಧವ್‌ ಠಾಕ್ರೆ ಪಕ್ಷಕ್ಕೆ ಬರಮಾಡಿಕೊಂಡರು. ಇವರ ಸೇರ್ಪಡೆಯಲ್ಲಿ ಆದಿತ್ಯ ಠಾಕ್ರೆ ಪ್ರಮುಖ ಪಾತ್ರವಹಿಸಿದ್ದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT