ಶನಿವಾರ, ಮಾರ್ಚ್ 6, 2021
32 °C

ಶಬರಿಮಲೆ ಗಲಭೆಯಲ್ಲಿ ಡಿವೈಎಫ್ಐ ಕೈವಾಡ: ಕೆ.ಸುರೇಂದ್ರನ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರಂ: ಶಬರಿಮಲೆಯಲ್ಲಿ ಚಿತ್ತಿರ ಆಟ್ಟ ವಿಶೇಷ ದಿನದಂದು ಸಂಭವಿಸಿದ ಗಲಭೆಯಲ್ಲಿ ತ್ರಿಶ್ಶೂರಿನ ಡಿವೈಎಫ್ಐ ಕಾರ್ಯಕರ್ತರ ಕೈವಾಡ ಇದೆ ಎಂದು ಕೇರಳ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.

ಗಲಭೆಯ ದೃಶ್ಯಗಳನ್ನು ನೋಡಿ ಯಾವ ಪಕ್ಷದ ಕಾರ್ಯಕರ್ತರು ಆ ಗಲಭೆಯಲ್ಲಿದ್ದರು ಎಂಬುದನ್ನು ಸರ್ಕಾರ ಹೇಳಬೇಕಿದೆ. ಸನ್ನಿಧಾನಕ್ಕೆ ಆಗಮಿಸುತ್ತಿದ್ದ ಮಹಿಳೆಯನ್ನು ತಡೆಯುವ ವೇಳೆ ಅವಳೆ ಕೊಲ್ಲ್ ಡಾ (ಆಕೆಯನ್ನು ಕೊಂದು ಬಿಡು) ಎಂಬ ಕೂಗು ವಿಡಿಯೊದಲ್ಲಿ ಕೇಳಿಸುತ್ತದೆ. ಈ ಕೂಗು ಯಾರದ್ದು ಎಂದು ಸರ್ಕಾರ ಹೇಳಬೇಕು ಎಂದಿದ್ದಾರೆ ಸುರೇಂದ್ರನ್.

ಚಿತ್ತಿರ ಆಟ್ಟ ವಿಶೇಷ ದಿನದಂದ ಮಗುವಿಗೆ ಅನ್ನಪ್ರಾಶನ ಮಾಡಲು ಬಂದ ಮಹಿಳೆಯನ್ನು ತಡೆದ ಪ್ರಕರಣದಲ್ಲಿ ಬಂಧಿತನಾಗಿದ್ದ ಸುರೇಂದ್ರನ್‌‍ಗೆ ಕೇರಳ ಹೈಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿತ್ತು.

ಶಬರಿಮಲೆ ವಿಷಯದಲ್ಲಿ ಸರ್ಕಾರ ಪರಾಭವಗೊಂಡಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಬಗ್ಗೆ ಸರ್ಕಾರದ ನಿಲುವು ಏನೆಂದು ಹೇಳಬೇಕು. ಸುಪ್ರೀಂಕೋರ್ಟ್ ತೀರ್ಪು ಬಗ್ಗೆ ಸಿಪಿಎಂನಲ್ಲಿಯೇ ಭಿನ್ನಮತ ಇದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಅವರ ಹಠ ಇದಕ್ಕೆಲ್ಲ ಕಾರಣ. ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದಾಗಿ ಹೇಳಿದ ಪಿಣರಾಯಿ ಈಗ ಹಿಂದೆ ಸರಿದಿರುವುದು ಯಾಕೆ ಎಂದು ಹೇಳಬೇಕು. ಭಕ್ತರ ನಂಬಿಕೆಯನ್ನು ಪರಿಗಣಿಸಿ ಪಿಣರಾಯಿ ಈ ವಿಷಯ ಬಗ್ಗೆ ಮೌನ  ಮುರಿಯಬೇಕು.
ಮುಂಜಾಗ್ರತಾ ಕ್ರಮ ಎಂದು ನನ್ನನ್ನು ಬಂಧಿಸಿದ ಪೊಲೀಸ್, ಆಮೇಲೆ ನನ್ನ ವಿರುದ್ಧ 5 ಸುಳ್ಳು ಪ್ರಕರಣಗಳನ್ನು ದಾಖಲಿಸಿದರು. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಪ್ರಕರಣಗಳನ್ನು ಕಾನೂನು ಮತ್ತು ರಾಜಕೀಯ ರೀತಿಯಲ್ಲಿಯೇ ಎದುರಿಸುತ್ತೇನೆ. ನನಗೆ ಚಹಾ ಖರೀದಿಸಿಕೊಟ್ಟ ಎಂದು ಒಬ್ಬ ಪೊಲೀಸ್  ಅಧಿಕಾರಿಯನ್ನು ವಜಾ ಮಾಡಲಾಗಿದೆ. ಎನ್ಎಸ್ಎಸ್, ತಂತ್ರಿ ಕುಟುಂಬ, ಪಂದಳಂ ರಾಜಮನೆತನದವರು ಮುಷ್ಕರದಲ್ಲಿ ಭಾಗಿಯಾದ ನಂತರವೇ ಈ ಮುಷ್ಕರ ಜನಪರ ಮುಷ್ಕರವಾಗಿ ಮಾರ್ಪಾಟಾಗಿದ್ದು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಂದ್ರನ್  ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು