ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಡ್ನಿ ಮಾರಾಟಕ್ಕಿದೆ; ಅಧಿಕಾರಿಗಳಿಗೆ ಲಂಚ ನೀಡಲು ಹಣ ಬೇಕಾಗಿದೆ: ಕೇರಳ ದಂಪತಿ

Last Updated 14 ಫೆಬ್ರುವರಿ 2019, 14:28 IST
ಅಕ್ಷರ ಗಾತ್ರ

ತಿರುವನಂತಪುರ: ‘ಕಿಡ್ನಿ ಮಾರಾಟಕ್ಕಿದೆ. ಅಧಿಕಾರಿಗಳಿಗೆ ಲಂಚ ನೀಡಲು ಹಣ ಬೇಕಾಗಿದೆ’

ಈ ರೀತಿಯಬೋರ್ಡ್‌ವೊಂದನ್ನುಕೇರಳದ ಇಡುಕ್ಕಿ ಜಿಲ್ಲೆಯ ಆದಿಮಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ವೆಲ್ಲಾತೋವಾಲ್ ನಿವಾಸಿ ಜೋಸೆಫ್ (72) ತಮ್ಮ ಮನೆಯ ಮುಂದೆ ನೇತುಹಾಕಿದ್ದಾರೆ.

ಕಳೆದ ವರ್ಷ ಕೇರಳ ಜನತೆಯ ನಿದ್ದೆಗಡೆಸಿದ್ದ ಪ್ರವಾಹಕ್ಕೆ ಜೋಸೆಫ್‌ ದಂಪತಿ ವಾಸವಿದ್ದ ಮನೆಯು ಹಾನಿಗೊಳಗಾಗಿದೆ. ಆದರೂ ಅನಿವಾರ್ಯವಾಗಿ ಈ ಕುಟುಂಬ ಇಲ್ಲಿಯೇ ನೆಲೆಸಿದೆ.ಪ್ರವಾಹ ಪೀಡಿತ ಕುಟುಂಬಗಳಿಗೆ ಸರ್ಕಾರ ಘೋಷಿಸಿರುವ ಕನಿಷ್ಠ ₹10 ಸಾವಿರ ಕೂಡ ತಲುಪಿಲ್ಲ ಎಂದು ಜೋಸೆಫ್ ಅಳಲು ತೋಡಿಕೊಂಡಿದ್ದಾರೆ.

ಪ್ರವಾಹಪೀಡಿತ ಪ್ರದೇಶಗಳನ್ನು ಕ್ಷಿಪ್ರಗತಿಯಲ್ಲಿ ರಿಪೇರಿ ಮಾಡುತ್ತಿರುವುದಾಗಿ ಕೇರಳ ಸರ್ಕಾರ ಹೇಳಿಕೊಂಡ ಬೆನ್ನಲ್ಲೇ ಈ ಘಟನೆ ನಡೆದಿದೆ. ದಂಪತಿಯ ಈ ಆರೋಪವನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.

‘ಜೋಸೆಫ್‌ ಅವರ ಮನೆಯ ಪೈಕಿ ಶೇಕಡಾ 29ರಷ್ಟು ಭಾಗ ಹಾನಿಗೆ ಒಳಗಾಗಿತ್ತು. ಈಗಿನ ನಿಯಮದ ಪ್ರಕಾರ ₹60ಸಾವಿರ ನೆರವು ನೀಡಲು ಸಾಧ್ಯವಿದೆ. ಈ ಮೊತ್ತ ಪಡೆಯಲು ಅವರು ಸಿದ್ಧರಿಲ್ಲದೇ, ಹೆಚ್ಚುವರಿ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ, ಪರಿಶೀಲನೆ ಹಂತದಲ್ಲಿದೆ’ ಎಂದುವೆಳ್ಳತೂವಲ್‌ ಪಂಚಾಯಿತಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಜೋಸೆಫ್‌ ಅವರ ಮನೆಯ ಒಂದು ಭಾಗವನ್ನು ಬಾಡಿಗೆಗೆ ನೀಡಿದ್ದು, ಹಾನಿಗೆ ಒಳಗಾದ ಬಾಡಿಗೆದಾರರಿಗೆ ₹10ಸಾವಿರ ಪರಿಹಾರ ನೀಡಲಾಗಿದೆ. ಪ್ರವಾಹದ ವೇಳೆ ಮನೆಯ ಸುತ್ತಲಿದ್ದ ಮಣ್ಣನ್ನು 173 ಮಾನವದಿನಗಳನ್ನು ಬಳಸಿ ತೆರವುಗೊಳಿಸಲಾಗಿದೆ’ ಎಂದು ತಿಳಿಸಿದರು.

ಜೋಸೆಫ್‌ ಅವರು ಕೂಲಿ ಕಾರ್ಮಿಕರಾಗಿದ್ದು, ಪತ್ನಿಯ ನೆರವಿನಿಂದ 9 ಕೋಣೆಯ ಸ್ವಂತ ಮನೆಯನ್ನು ನಿರ್ಮಿಸಿಕೊಂಡಿದ್ದರು. ಇವರ ಮಕ್ಕಳು ಮದುವೆಯಾಗಿ, ಬೇರೆ ಕಡೆ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT