ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಭಾರಿ ಮಳೆ, ಇಬ್ಬರ ಸಾವು

Last Updated 20 ಜುಲೈ 2019, 19:30 IST
ಅಕ್ಷರ ಗಾತ್ರ

ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಇಬ್ಬರು ಮೃತಪಟ್ಟಿದ್ದು, ತಮಿಳುನಾಡಿನ ಮೂವರು ಸೇರಿದಂತೆ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ.ಕಾಸರಗೂಡು ಜಿಲ್ಲೆಯ ಕೂಡ್ಲುವಿನಲ್ಲಿ ಶನಿವಾರದವರೆಗೆ 30 ಸೆಂ.ಮೀ ಮಳೆ ದಾಖಲಾಗಿದೆ.

ಇಡುಕ್ಕಿ ಜಿಲ್ಲೆಯಕೊನ್ನತ್ತಡಿ ಗ್ರಾಮದಲ್ಲಿ ಶನಿವಾರ ಸಣ್ಣ ಪ್ರಮಾಣದಲ್ಲಿ ಭೂ ಕುಸಿತವಾಗಿದ್ದು,ಬೆಳೆ ನಷ್ಟವಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮೀನುಗಾರಿಕೆಗೆ ಹೋಗಿದ್ದ ಕೋಶಿ ವರ್ಗೀಸ್ (53) ಅವರು ತಿರುವಲ್ಲ ಬಳಿಯ ಮಣಿಮಲ ನದಿಗೆ ಜಾರಿ ಮೃತಪಟ್ಟಿದ್ದಾರೆ.ಕೊಲ್ಲಂನಲ್ಲಿ ತೆಂಗಿನ ಮರ ಬಿದ್ದುದಿಲೀಪ್ ಕುಮಾರ್ (54) ಎಂಬುವರು ಸತ್ತಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಮೂಲಗಳು ತಿಳಿಸಿವೆ.

ಕೊಲ್ಲಂನ ನೀಂದಕರದಿಂದ ಸಮುದ್ರಕ್ಕೆ ಹೊರಟಿದ್ದ ತಮಿಳುನಾಡಿನ ಮೂವರು ಮೀನುಗಾರರು ಕಾಣೆಯಾಗಿದ್ದಾರೆ. ಅವರ ದೋಣಿಯಲ್ಲಿದ್ದ ಇತರ ಇಬ್ಬರು ಈಜಿ ಯಶಸ್ವಿಯಾಗಿ ದಡ ಸೇರಿದ್ದಾರೆ. ಫೋರ್ಟ್ ಕೊಚ್ಚಿ ಬೀಚ್‌ನಲ್ಲಿ ವ್ಯಕ್ತಿಯೊಬ್ಬರು ಕಾಣೆಯಾಗಿದ್ದಾರೆ.

ದೆಹಲಿಯ ಕೆಲವೆಡೆ ಮಳೆ

ದೇಶದ ರಾಜಧಾನಿ ದೆಹಲಿಯ ಕೆಲವೆಡೆ ಶನಿವಾರ ಮಳೆಯಾಗಿದ್ದು, ತಾಪಮಾನ ಇಳಿಕೆಯಾಗಿದೆ.ಒಣ ಹವೆಯಿಂದ ಕಂಗಾಲಾಗಿದ್ದ ರಾಜಧಾನಿಯ ಜನರೀಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT