ಆರ್‌ಎಸ್‌ಎಸ್‌ ಸೇವೆಗೆ ರಾಮ್‌ಲಾಲ್‌

ಶನಿವಾರ, ಜೂಲೈ 20, 2019
22 °C
ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್‌ ನೇಮಕ ಸಂಭವ

ಆರ್‌ಎಸ್‌ಎಸ್‌ ಸೇವೆಗೆ ರಾಮ್‌ಲಾಲ್‌

Published:
Updated:
Prajavani

ನವದೆಹಲಿ: ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಸುದೀರ್ಘ 13 ವರ್ಷಗಳ ಅವಧಿಗೆ ಸೇವೆ ಸಲ್ಲಿಸಿರುವ ರಾಮ್‌ಲಾಲ್‌ ಅವರನ್ನು ಮರಳಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸೇವೆಗೆ ಕಳುಹಿಸಲಾಗಿದೆ.

ಬಿಜೆಪಿಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿರುವ ವಿ.ಸತೀಶ್‌ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗುತ್ತದೆ ಎಂದು ಆರ್‌ಎಸ್‌ಎಸ್‌ ಮೂಲಗಳು ಹೇಳಿವೆ. ಇದು ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ನಂತರದ ಪ್ರಭಾವಿ ಹುದ್ದೆ ಎಂದೇ
ಪರಿಗಣಿಸಲಾಗುತ್ತದೆ.

‘ರಾಮ್‌ಲಾಲ್‌ ಅವರು ಈ ಮೊದಲು ಸಂಘದಲ್ಲಿ ನಿಭಾಯಿಸಿದ್ದ ‘ಅಖಿಲ ಭಾರತೀಯ ಸಹಸಂಪರ್ಕ ಪ್ರಮುಖ್‌’ ಹುದ್ದೆಯಲ್ಲಿಯೇ ಮುಂದುವರಿಯಲಿದ್ದಾರೆ. ವಿಜಯವಾಡದಲ್ಲಿ ಶನಿವಾರ ಮುಕ್ತಾಯಗೊಂಡ ಸಂಘದ ಪ್ರಾಂತ ಪ್ರಚಾರಕ ಬೈಠಕ್‌ನಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು’ ಎಂದು ಸಂಘಟನೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !