ಸೋಮವಾರ, ಜನವರಿ 20, 2020
27 °C

ರಾಜಸ್ಥಾನ: ಶಿಶುಮರಣ 107ಕ್ಕೆ ಏರಿಕೆ, ಸರ್ಕಾರಕ್ಕೆ ಮಾನವ ಹಕ್ಕು ಆಯೋಗ ನೊಟೀಸ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಜೈಪುರ: ರಾಜಸ್ಥಾನದ ಕೋಟ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರವೂ ಶಿಶುವೊಂದು ಮೃತಪಟ್ಟಿದ್ದು, ಇದರೊಂದಿಗೆ ಡಿಸೆಂಬರ್ ತಿಂಗಳ ಬಳಿಕ ಈವರೆಗೆ ಮೃತಪಟ್ಟಿರುವ ಶಿಶುಗಳ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ನೂರಾರು ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಹಕ್ಕು ಆಯೋಗ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿಮಾಡಿದೆ.

‘ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಮೃತಪಟ್ಟಿರುವುದು ವಿಷಾದದ ಸಂಗತಿ. ಮಕ್ಕಳ ಸಾವಿನ ಬಗ್ಗೆ ಆಯೋಗಕ್ಕೆ ಕಾಳಜಿಯಿದೆ. ನಾಗರಿಕರಿಗೆ ಆರೋಗ್ಯ ಸೌಲಭ್ಯ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ’ ಎಂದು ಆಯೋಗ ಹೇಳಿದೆ.

ಇದನ್ನೂ ಓದಿ: ಒಂದು ತಿಂಗಳಲ್ಲೇ 100 ಶಿಶುಗಳ ಸಾವು

ಶಿಶುಮರಣದ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಆಧರಿಸಿ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಈ ಕುರಿತು ನಾಲ್ಕುವಾರಗಳ ಒಳಗೆ ವಿಸ್ತೃತ ವರದಿ ನೀಡುವಂತೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಆಯೋಗ ನೋಟಿಸ್ ಜಾರಿಮಾಡಿದೆ.

‘ಮುಂದಿನ ದಿನಗಳಲ್ಲಿ ಶಿಶುಮರಣ ಪ್ರಮಾಣ ತಗ್ಗಿಸಲು, ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ಆಯೋಗ ಹೇಳಿದೆ.

‘ಆಸ್ಪತ್ರೆಯಲ್ಲಿರುವ ಅರ್ಧದಷ್ಟು ಉಪಕರಣಗಳು ಕೆಲಸ ಮಾಡುತ್ತಿಲ್ಲ. ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಆಮ್ಲಜನಕ ಪೂರೈಕೆ, ಸ್ವಚ್ಛತೆ ಮತ್ತು ಇತರ ಸೌಲಭ್ಯಗಳು ಸರಿಯಿಲ್ಲ’ ಎಂಬ ಮಾಧ್ಯಮ ವರದಿಗಳನ್ನೂ ಆಯೋಗ ಉಲ್ಲೇಖಿಸಿದೆ.

ಕೋಟ ಆಸ್ಪತ್ರೆಗೆ ಕೇಂದ್ರ ತಂಡ ಭೇಟಿ

ಶಿಶುಮರಣ ಪ್ರಮಾಣ ತಗ್ಗಿಸಲು ಸ್ಥಳೀಯ ವೈದ್ಯರಿಗೆ ಅಗತ್ಯ ಸಲಹೆ ನೀಡಲು ಏಮ್ಸ್‌ನ ತಜ್ಞ ವೈದ್ಯರು ಮತ್ತು ಆಸ್ಪತ್ರೆಯ ಅಗತ್ಯಗಳ ಅರಿವಿರುವ ಪರಿಣಿತರ ತಂಡ ಕೋಟ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿತು. ಲೋಕಸಭಾ ಸ್ಪೀಕರ್ ಮತ್ತು ಕೋಟ ಕ್ಷೇತ್ರದ ಸಂಸದ ಓಂ ಬಿರ್ಲಾ ಸಹ ನಗರಕ್ಕೆ ಶನಿವಾರ ಭೇಟಿ ನೀಡಿ, ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು