ಶನಿವಾರ, ಜೂಲೈ 11, 2020
28 °C
ಈ ಬಾರಿ 45 ಕಿ.ಮೀ. ವ್ಯಾಪ್ತಿಯಲ್ಲಿ ಜ.15ರಿಂದ ನಡೆಯಲಿದೆ ಬೃಹತ್‌ ಮೇಳ

ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ ಸಜ್ಜು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಲಹಾಬಾದ್‌: ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಕುಂಭಮೇಳಕ್ಕೆ ಅಲಹಾಬಾದ್‌ ಸಜ್ಜಾಗುತ್ತಿದ್ದು, ಈ ಬಾರಿ 45 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಮೇಳದ ಧಾರ್ಮಿಕ ಚಟುವಟಿಕೆಗಳು ನಡೆಯಲಿವೆ. ಈ ಮೊದಲು 20 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಕುಂಭಮೇಳ ಜರುಗುತ್ತಿತ್ತು. 

‘ಹಿಂದೂಗಳ ಸಾಮೂಹಿಕ ತೀರ್ಥಯಾತ್ರೆ ಎನಿಸುವ ಕುಂಭಮೇಳ ನಡೆಯುವ ಪ್ರದೇಶದ ವ್ಯಾಪ್ತಿಯು ಈ ಬಾರಿ ದುಪ್ಪಟ್ಟಾಗಿದೆ’ ಎಂದು ಪ್ರಯಾಗ್‌ರಾಜ್‌ನ ಮೇಯರ್‌ ಅಭಿಲಾಷ ಗುಪ್ತಾ ತಿಳಿಸಿದರು. 

2019ರ ಜನವರಿ 15ರ ಮಕರ ಸಂಕ್ರಾಂತಿಯಂದು ಕುಂಭಮೇಳ ಪ್ರಾರಂಭ ವಾಗಲಿದ್ದು, ಮಾರ್ಚ್‌ 4ರ ಮಹಾಶಿವರಾತ್ರಿಯಂದು ಮುಕ್ತಾಯವಾಗಲಿದೆ.

‘ಈ ಬಾರಿಯ ಅರ್ಧ ಕುಂಭಮೇಳದ ಸಂದರ್ಭದಲ್ಲಿ ಭಕ್ತಾದಿಗಳು ಅಕ್ಷಯ ವಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬಹುದಾಗಿದೆ’ ಎಂದು ಪ್ರಧಾನಿ
ನರೇಂದ್ರ ಮೋದಿ ಕಳೆದ ತಿಂಗಳು ಹೇಳಿದ್ದರು. 

ಅರ್ಧಕುಂಭಮೇಳದ ಸಂದರ್ಭದಲ್ಲಿ ಹಲವು ವರ್ಷಗಳಿಂದ ಭಕ್ತಾದಿಗಳಿಗೆ ಅಕ್ಷಯ ವಟದ ಬಳಿ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ವೃಕ್ಷದ ಕೆಳಗೆ ರಾಮ, ಲಕ್ಷ್ಮಣ ಮತ್ತು ಸೀತೆ ವಿಶ್ರಮಿಸಿದ್ದರು ಎಂಬ ಪ್ರತೀತಿ ಇದೆ. 

ಈ ಬಾರಿಯ ಕುಂಭಮೇಳಕ್ಕಾಗಿ ಅಲಹಾಬಾದ್‌ಗೆ ಭಕ್ತರು ಭೂ, ವಾಯು ಮತ್ತು ಜಲ ಮಾರ್ಗದ ಮೂಲಕ ಬರಬಹುದಾಗಿದೆ. ಇದೇ ಮೊದಲ ಬಾರಿಗೆ ಭಕ್ತರಿಗೆ ಇಂತಹ ಸೌಲಭ್ಯ ಸಿಗುತ್ತಿದೆ ಎಂದು ಉತ್ತರಪ್ರದೇಶದ ಅಧಿಕಾರಿಗಳು ಹೇಳಿದ್ದಾರೆ.

‘ನಮ್ಮ ಪ್ರಾಚೀನ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕವಾದ ಕುಂಭಮೇಳವನ್ನು ಆಧುನಿಕತೆ ಮತ್ತು ತಂತ್ರಜ್ಞಾನದ ಸಹಕಾರದೊಂದಿಗೆ ಈ ಬಾರಿ ಅಭೂತಪೂರ್ವವಾಗಿ ಆಚರಿಸಲಾಗುವುದು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. 

‘ಕುಂಭಮೇಳದ ಸಿದ್ಧತೆಯನ್ನು ನೋಡುವುದಕ್ಕಾಗಿಯೇ 70 ದೇಶಗಳ ಪ್ರತಿನಿಧಿಗಳು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ. 

ಪ್ರತಿ 6 ವರ್ಷಕ್ಕೊಮ್ಮೆ ಅರ್ಧ ಕುಂಭಮೇಳ, ಪ್ರತಿ 12 ವರ್ಷಕ್ಕೊಮ್ಮೆ ಪೂರ್ಣ ಕುಂಭಮೇಳ ನಡೆಯುತ್ತದೆ. ಇದು ಹಿಂದೂಗಳ ಸಾಮೂಹಿಕ ತೀರ್ಥಯಾತ್ರೆ ಇದಾಗಿದ್ದು, ಈ ನದಿಗಳಲ್ಲಿ ಭಕ್ತರು ಪುಣ್ಯಸ್ನಾನ ಮಾಡುತ್ತಾರೆ. ಪ್ರತಿ 6 ವರ್ಷಕ್ಕೊಮ್ಮೆ ಅರ್ಧ ಕುಂಭಮೇಳ, ಪ್ರತಿ 12 ವರ್ಷಕ್ಕೊಮ್ಮೆ ಪೂರ್ಣ ಕುಂಭಮೇಳ ನಡೆಯುತ್ತದೆ. ಇದು ಹಿಂದೂಗಳ ಸಾಮೂಹಿಕ ತೀರ್ಥಯಾತ್ರೆ ಇದಾಗಿದ್ದು, ಈ ನದಿಗಳಲ್ಲಿ ಭಕ್ತರು ಪುಣ್ಯಸ್ನಾನ ಮಾಡುತ್ತಾರೆ.

ಪೌರಾಣಿಕ ಹಿನ್ನೆಲೆ

ಸಮುದ್ರ ಮಥನದಲ್ಲಿ ದೊರೆತ ಅಮೃತ ಕಲಶಕ್ಕಾಗಿ ದೇವತೆಗಳು ಮತ್ತು ರಾಕ್ಷಸರ ಮಧ್ಯೆ 12 ದಿನ ಯುದ್ಧ ನಡೆಯುತ್ತದೆ. ಯುದ್ಧ ನಡೆದಿರುವಾಗಲೇ ವಿಷ್ಣು ಅಮೃತದ ಕಲಶ (ಕುಂಭ) ತೆಗೆದುಕೊಂಡು ಹೋಗುವಾಗ ಅಮೃತದ ನಾಲ್ಕು ಹನಿಗಳು ಅಲಹಾಬಾದ್‌, ಹರಿದ್ವಾರ, ಉಜ್ಜಯನಿ ಮತ್ತು ನಾಸಿಕ್‌ಗಳಲ್ಲಿ ಬಿದ್ದಿವೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಈ ಹಿನ್ನೆಲೆಯಲ್ಲಿ ಹರಿದ್ವಾರ (ಗಂಗಾ ನದಿ), ನಾಸಿಕ್‌ (ಗೋದಾವರಿ), ಉಜ್ಜೈನ (ಕ್ಷಿಪ್ರಾ), ಅಲಹಾಬಾದ್‌ನ ಪ್ರಯಾಗ್‌ ರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಂಗಮ ಸ್ಥಳದಲ್ಲಿ ಈ ಕುಂಭಮೇಳ ನಡೆಯುತ್ತದೆ.

ಪ್ರತಿ 6 ವರ್ಷಕ್ಕೊಮ್ಮೆ ಅರ್ಧ ಕುಂಭಮೇಳ, ಪ್ರತಿ 12 ವರ್ಷಕ್ಕೊಮ್ಮೆ ಪೂರ್ಣ ಕುಂಭಮೇಳ ನಡೆಯುತ್ತದೆ. ಇದು ಹಿಂದೂಗಳ ಸಾಮೂಹಿಕ ತೀರ್ಥಯಾತ್ರೆ ಇದಾಗಿದ್ದು, ಈ ನದಿಗಳಲ್ಲಿ ಭಕ್ತರು ಪುಣ್ಯಸ್ನಾನ ಮಾಡುತ್ತಾರೆ.

****

‘ಈ ಬಾರಿ ಅತ್ಯದ್ಭುತವಾಗಿ ಕುಂಭಮೇಳ ಜರುಗಲಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ

-ಯೋಗಿ ಆದಿತ್ಯನಾಥ, ಉತ್ತರಪ್ರದೇಶ ಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು