ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: ಲಡಾಕ್‌ನಲ್ಲಿ ಒಂದೇ ದಿನ 18 ಹೊಸ ಪ್ರಕರಣ ಪತ್ತೆ

Last Updated 3 ಮೇ 2020, 7:07 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರಾಡಳಿತ ಪ್ರದೇಶ ಲಡಾಕ್‌ನಲ್ಲಿ ದಿಢೀರನೆ ಕೋವಿಡ್-19 ರೋಗ ಪ್ರಕರಣಗಳು ಏರಿಕೆಯಾಗಿವೆ. ಭಾನುವಾರ 18 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕು ದೃಢಪಟ್ಟವರ ಸಂಖ್ಯೆ 24ಕ್ಕೇರಿದೆ.

ಚುಹೋಟ್-ಯೊಕ್ಮಾ ಪ್ರದೇಶದಲ್ಲಿ 18 ಹೊಸ ಪ್ರಕರಣಗಳು ಪತ್ತೆಯಾಗಿವೆ. ದಯವಿಟ್ಟು ಮನೆಯೊಳಗೆ ಇರಿ ಮತ್ತು ಅಂತರ ಕಾಯ್ದುಕೊಳ್ಳಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ರಿಗಿಜಿನ್ ಸಂಫಾಲ್ ಟ್ವೀಟಿಸಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ ದೇಶದಲ್ಲಿರುವ ಪ್ರಕರಣಗಳ ಸಂಖ್ಯೆ 39980 ಆಗಿದೆ. ಇಲ್ಲಿಯವರಿಗೆ 1301 ಮಂದಿ ಸಾವಿಗೀಡಾಗಿದ್ದು , 10633 ಮಂದಿ ಚೇತರಿಸಿಕೊಂಡಿದ್ದಾರೆ.

ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಯೊಬ್ಬರ ನೌಕರನಿಗೆ ಕೋವಿಡ್-19 ದೃಢಪಟ್ಟ ಹಿನ್ನಲೆಯಲ್ಲಿ ದೆಹಲಿಯಲ್ಲಿರುವ ಸಿಆರ್‌ಪಿಎಫ್ ಪ್ರಧಾನ ಕಚೇರಿಯನ್ನು ಸ್ಯಾನಿಟೈಜ್ ಮಾಡುವ ಸಲುವಾಗಿ ಮುಚ್ಚಲಾಗಿದೆ. ಕಚೇರಿ ಕಟ್ಟಡಕ್ಕೆ ಯಾರೊಬ್ಬರಿಗೂ ಪ್ರವೇಶವಿಲ್ಲ ಎಂದು ಸಿಆರ್‌ಪಿಎಫ್ ಹೇಳಿದೆ.

ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ ಅತೀ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಶನಿವಾರ ಸಾವಿನ ಸಂಖ್ಯೆ 500 ದಾಟಿದೆ. ಶನಿವಾರ ಇಲ್ಲಿ 36 ಮಂದಿ ಸಾವಿಗೀಡಾಗಿದ್ದಾರೆ. ಮುಂಬೈನಲ್ಲಿ 300ಕ್ಕಿಂತಲೂ ಹೆಚ್ಚು ಸಾವಿಗೀಡಾಗಿದ್ದು. ರಾಜ್ಯದಲ್ಲಿ ಇಲ್ಲಿವರೆಗೆ ಮೃತಪಟ್ಟವರ ಸಂಖ್ಯೆ 521 ಆಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 12,269.

ದೆಹಲಿ ಮತ್ತು ತ್ರಿಪುರದಲ್ಲಿ ಗಡಿ ರಕ್ಷಣಾ ಪಡೆಯ (ಬಿಎಸ್‌ಎಫ್) 17 ಮಂದಿಗೆ ಸೋಂಕು ದೃಢಪಟ್ಟಿಗೆ ಎಂದು ಸೇನೆಯ ವಕ್ತಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT