ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನ 5 ಮಹಾನಗರಗಳಲ್ಲಿ ಇಂದಿನಿಂದ ಸಂಪೂರ್ಣ ನಿರ್ಬಂಧ; ಸರ್ಕಾರದ ಕಠಿಣ ಕ್ರಮ

Last Updated 26 ಏಪ್ರಿಲ್ 2020, 4:29 IST
ಅಕ್ಷರ ಗಾತ್ರ

ಚೆನ್ನೈ: ಕೊರೊನಾ ವೈರಸ್‌ ಸೋಂಕು ಹರಡುವಿಕೆ ಪರಿಶೀಲಿಸಲು ಮತ್ತು ತಡೆಗಟ್ಟಲು ತಮಿಳುನಾಡಿನ ಐದು ಮಹಾನಗರಗಳಾದ ಚೆನ್ನೈ, ಕೊಯಿಮತ್ತೂರು, ಮಧುರೈ, ಸೇಲಂ ಮತ್ತು ತಿರುಪ್ಪುರಗಳನ್ನು ಭಾನುವಾರದಿಂದ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿದೆ.

ನಿರ್ಬಂಧಗಳನ್ನು ಬಿಗಿಗೊಳಿಸಿ, ತಮಿಳುನಾಡಿನ ಐದು ಮಹಾನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಹೇಳಿದ್ದಾರೆ.

ಚೆನ್ನೈ, ಕೊಯಮತ್ತೂರು ಮತ್ತು ಮಧುರೈಗಳಲ್ಲಿ ನಾಲ್ಕು ದಿನಗಳವರೆಗೆ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುವುದು. ಇತರ ಎರಡು ನಗರಗಳಿಗೆ ಮೂರು ದಿನಗಳವರೆಗೆ ಲಾಕ್‌ಡೌನ್‌ ನಿರ್ಬಂಧಗಳು ಅನ್ವಯವಾಗುತ್ತವೆ ಎಂದು ಸರ್ಕಾರ ತಿಳಿಸಿದೆ.

ದಿನಸಿ ಅಂಗಡಿ, ತರಕಾರಿ ಮಾರುಕಟ್ಟೆಗಳ ವ್ಯಾಪಾರ, ಸಾರ್ವಜನಿಕ ಸಂಚಾರಗಳನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸರ್ಕಾರ ಆದೇಶಿಸಿದೆ.

ಮೊಬೈಲ್‌ ಔಟ್‌ಲೆಟ್‌ಗಳ ಮೂಲಕ ತರಕಾರಿ ಮತ್ತು ಹಣ್ಣುಗಳು ಮನೆ ಬಾಗಿಲಿಗೆ ತಲುಪುಲಿವೆ ಎಂದು ಪಳನಿಸ್ವಾಮಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT