ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಮಿಡತೆ ಹಾವಳಿ; ಮಥುರಾ ಮತ್ತು ದೆಹಲಿಯಲ್ಲಿ ಮುಂಜಾಗ್ರತಾ ಕ್ರಮ

Last Updated 26 ಮೇ 2020, 10:13 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ನಾಲ್ಕೈದು ಗ್ರಾಮಗಳು ಮಿಡತೆಗಳ ಹಾವಳಿಯಿಂದ ತತ್ತರಿಸಿವೆ. ಈ ಮಿಡತೆಗಳುಬೆಳೆಗಳನ್ನು ಹಾಳು ಮಾಡುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ.

ಬೆಳೆಗಳಿಗೆ ರಾಸಾಯನಿಕ ವಸ್ತು ಸಿಂಪಡಿಸುವುದರಿಂದ ಅವುಗಳನ್ನು ನಿಯಂತ್ರಿಸಬಹುದು ಎಂದು ಮಹಾರಾಷ್ಟ್ರದ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಮರಾವತಿ ಜಿಲ್ಲೆಯಿಂದ ಮಿಡತೆಗಳ ಹಿಂಡು ಹಾರಿ ಬಂದಿತ್ತು. ಅಲ್ಲಿಂದ ಅದು ವಾರ್ಧಾಕ್ಕೆ ತಲುಪಿ ಇದೀಗ ನಾಗ್ಪುರದ ಕಟೋಲ್‌ನಲ್ಲಿ ಬಂದು ಸೇರಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಬೋಸ್ಲೆ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಮಿಡತೆಗಳು ರಾತ್ರಿ ಹೊತ್ತು ಸಂಚರಿಸುವುದಿಲ್ಲ.ವಲಸೆ ಹೋಗುವ ಕೀಟಗಳು ಹಗಲು ಹೊತ್ತಿನಲ್ಲಿ ಮಾತ್ರ ಸಂಚರಿಸುತ್ತಿದ್ದು ಗಾಳಿಯ ದಿಶೆಯನುಸರಿಸಿ ಹಾರುತ್ತವೆ. ಇವುಎಲ್ಲ ರೀತಿಯ ಬೆಳೆಗಳಿಗೆ ಹಾನಿಯುಂಟು ಮಾಡುತ್ತವೆ. ಇವುಗಳು ಹಸಿರೆಲೆಗಳನ್ನು ತಿನ್ನುತ್ತಿದ್ದು, ಎಕರೆಗಟ್ಟಲೆ ಜಮೀನಿನಲ್ಲಿರುವ ಬೆಳೆಗಳನ್ನು ನಾಶ ಮಾಡುತ್ತವೆ ಎಂದು ಬೋಸ್ಲೆ ಹೇಳಿದ್ದಾರೆ.

ಉತ್ತರ ಪ್ರದೇಶದ ಮಥುರಾದಲ್ಲಿ ಮಿಡತೆ ದಾಳಿಯನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪಾಕಿಸ್ತಾನದಿಂದ ಈ ಮಿಡತೆಗಳು ರಾಜಸ್ತಾನ ಮೂಲಕ ಏಪ್ರಿಲ್ 11 ರಂದು ಭಾರತಕ್ಕೆ ಬಂದಿದ್ದವು. ಸೋಮವಾರ ಇವು ಜೈಪುರ ನಗರಕ್ಕೆ ಪ್ರವೇಶಿಸಿದ್ದವು.

200 ಲೀಟರ್ ಕ್ಲೋರೊಪೈರಿಫೋಸ್‌ನ್ನು ತೆಗೆದಿರಿಸಿದ್ದು, ಜಿಲ್ಲೆಯಿಂದ ಹೊರಗಿನವರಿಗೆ ಈ ರಾಸಾಯನಿಕ ದ್ರಾವಣವನ್ನು ಮಾರಾಟ ಮಾಡುವುದು ಬೇಡ. 12 ಟ್ರ್ಯಾಕ್ಟರ್‌ಗಳಲ್ಲಿ ಸ್ಪೇಯರ್‌ಗಳನ್ನು ಸಿದ್ಧ ಮಾಡಿಟ್ಟುಕೊಂಡಿದ್ದು, ಅಗ್ನಿ ಶಾಮಕ ದಳ ಎಚ್ಚರಿಕೆಯಿಂದಿರುವಂತೆ ಹೇಳಲಾಗಿದೆ ಎಂದಿದ್ದಾರೆ ಮಥುರಾ ಜಿಲ್ಲಾ ಮೆಜಿಸ್ಟ್ರೇಟ್.

ಮಿಡತೆಗಳ ಹಿಂಡು ರಾಜಸ್ಥಾನ, ಪಂಜಾಬ್, ಹರ್ಯಾಣ ಮತ್ತು ಮಧ್ಯ ಪ್ರದೇಶಕ್ಕೆ ತಲುಪಿದೆ ಎಂದ ಕೇಂದ್ರ ಪರಿಸರ ಸಚಿವಾಲಯ ಕಳೆದ ವಾರವೇ ಹೇಳಿತ್ತು. ದೇಶದ ರಾಜಧಾನಿ ದೆಹಲಿಯಲ್ಲಿಯೂ ಮುಂಜಾಗ್ರತೆ ವಹಿಸಲಾಗಿದೆ.

ರಾಜಸ್ಥಾನ ಮಿಡತೆ ಹಾವಳಿಯಿಂದ ಕಂಗೆಟ್ಟಿದ್ದು, ನಿರೀಕ್ಷಿತ ಸಮಯಕ್ಕಿಂತ ಮುಂಚೆಯೇ ಇವುಗಳು ಭಾರತಕ್ಕೆಬಂದಿವೆ. ಮಿಡತೆಗಳುಈ ವರ್ಷ ಭಾರತದ ಕೃಷಿಗೆ ತೀವ್ರ ಅಪಾಯ ಉಂಟುಮಾಡುತ್ತದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT