ಖಾತೆ ಹಂಚಿಕೆಗೆ ಅನುಮೋದನೆ ನೀಡಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅಂತಿಮಗೊಳಿಸಿದಂತೆ ರಾಜ್ಯ ಸಚಿವ ಸಂಪುಟದಲ್ಲಿ ಖಾತೆಗಳನ್ನು ಹಂಚಿಕೆ ಮಾಡಲು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಭಾನುವಾರ ಅನುಮೋದನೆ ನೀಡಿದ್ದಾರೆ.
ರಾಜ್ಯಪಾಲರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತು ಹೇಳಲಾಗಿದ್ದು, ಸಚಿವ ಖಾತೆ ಹಂಚಿಕೆ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪ್ರಸ್ತಾವನೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಅನುಮೋದನೆ ನೀಡಿದ್ದಾರೆ ಎಂದು ಹೇಳಿದೆ.
Governor Bhagat Singh Koshyari has approved the allocation of portfolios as proposed by Chief Minister Uddhav Thackeray.
— Governor of Maharashtra (@maha_governor) January 5, 2020
ಇನ್ನು ಶನಿವಾರ ಸಂಜೆ ಖಾತೆ ಹಂಚಿಕೆ ಪಟ್ಟಿಯನ್ನು ರಾಜ್ಯಪಾಲರ ಕಚೇರಿಗೆ ಕಳುಹಿಸಲಾಗಿತ್ತು. ಆದರೆ ಅನುಮೋದನೆ ಸಿಕ್ಕಿರಲಿಲ್ಲ. ಹೀಗಾಗಿ ಒಂದು ದಿನ ವಿಳಂಬವಾದರೆ, ಇದಕ್ಕೂ ಮುನ್ನ ಮೂರು ಆಡಳಿತ ಮಿತ್ರರಾಷ್ಟ್ರಗಳಾದ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಖಾತೆ ಹಂಚಿಕೆ ವಿಳಂಬವಾಗಿತ್ತು.
Maharashtra Governor Bhagat Singh Koshyari has approved the allocation of portfolios as proposed by Chief Minister Uddhav Thackeray. (File pics) pic.twitter.com/pVJnn7i7lM
— ANI (@ANI) January 5, 2020
ಆದಾಗ್ಯೂ, ರಾಜ್ಯಪಾಲ ಭಗತ್ ಸಿಂಗ್ ಅವರು ಒಂದು ದಿನ ವಿಳಂಬ ಮಾಡಿದ್ದಕ್ಕಾಗಿ ಎನ್‌ಸಿಪಿ ಕಿಡಿಕಾರಿದ್ದು, ರಾಜ್ಯ ಸಚಿವ ಮತ್ತು ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಟ್ವೀಟ್ ಮಾಡಿ, ಖಾತೆ ಹಂಚಿಕೆ ಪಟ್ಟಿಯನ್ನು ರಾಜ್ಯಪಾಲರ ಕಚೇರಿಗೆ ಸಂಜೆ 7.30ಕ್ಕೆ ಕಳುಹಿಸಲಾಯಿತು ಎಂದಿದ್ದಾರೆ. ರಾಜ್ಯ ಸರ್ಕಾರದ ಅಧಿಕೃತ ಮೂಲಗಳು ಪಟ್ಟಿಯನ್ನು ರಾತ್ರಿ 8, 8.30 ಸುಮಾರಿಗೆ ಕಳುಹಿಸಲಾಯಿತು ಎಂದಿದ್ದರೆ, ಇತ್ತ ಸೇನೆ ಮತ್ತು ಎನ್‌ಸಿಪಿಯು ಪಟ್ಟಿಯನ್ನು 9.45ಕ್ಕೆ ಕಳುಹಿಸಿದೆ ಎಂದು ಹೇಳಿವೆ.
ಇದನ್ನೂ ಓದಿ: ಖಾತೆ ಹಂಚಿದ ಉದ್ಧವ್: ಶಿವಸೇನಾಗೆ ಗೃಹ, ಎನ್ಸಿಪಿಗೆ ಹಣಕಾಸು, ಕೈಗೆ ಕಂದಾಯ
ರಾಜ್ಯಪಾಲರ ಕಚೇರಿ ನಡೆಯು ಅತ್ಯಂತ ಆಶ್ಚರ್ಯಕರವಾಗಿದೆ ಎಂದಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಇದೇ ರಾಜ್ಯಪಾಲರು ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದರು ಮತ್ತು ಮುಂಜಾನೆಯೇ ದೇವೇಂದ್ರ ಫಡಣವೀಸ್ ಮತ್ತು ಅಜಿತ್ ಪವಾರ್ ಪ್ರಮಾಣವಚನ ಸ್ವೀಕಾರಕ್ಕೆ ಅನುವು ಮಾಡಿಕೊಟ್ಟರು. ಇದೀಗ ಒಂದು ದಿನದ ಬಳಿಕ ಪಟ್ಟಿಗೆ ಅನುಮೋದನೆ ನೀಡಿದ್ದು, ಸಚಿವರು ನಾಳೆಯಿಂದ ಕೆಲಸ ಶುರುಮಾಡಲಿದ್ದಾರೆ ಎಂದು ಸಂಡೆ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.