ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧದಿಂದ ನಷ್ಟ ಆಗಿದ್ದು 3 ಲಕ್ಷ ಉದ್ಯೋಗ! 

7

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧದಿಂದ ನಷ್ಟ ಆಗಿದ್ದು 3 ಲಕ್ಷ ಉದ್ಯೋಗ! 

Published:
Updated:

ಮುಂಬೈ : ಕ್ಯಾರಿಬ್ಯಾಗ್‌, ಥರ್ಮಾಕೋಲ್‌ ಸೇರಿದಂತೆ ಪ್ಲಾಸ್ಟಿಕ್‌ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮದಿಂದ ಮಹಾರಾಷ್ಟ್ರದಲ್ಲಿರುವ ಪ್ಲಾಸ್ಟಿಕ್‌ ಉತ್ಪಾದನಾ ಉದ್ಯಮ ಭಾರಿ ನಷ್ಟ ಅನುಭವಿಸುವ ಆತಂಕ ಎದುರಿಸುತ್ತಿದೆ.

‘ಸರ್ಕಾರದ ಈ ನಡೆಯಿಂದ ಉದ್ಯಮಕ್ಕೆ ₹ 15 ಸಾವಿರ ಕೋಟಿ ನಷ್ಟವಾಗಲಿದ್ದರೆ, 3 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ’ ಎಂದು ಭಾರತೀಯ ಪ್ಲಾಸ್ಟಿಕ್‌ ಬ್ಯಾಗ್‌ಗಳ ಉತ್ಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ನೀಮಿತ್‌ ಪೂನಾಮಿಯಾ ಪಿಟಿಐಗೆ ತಿಳಿಸಿದ್ದಾರೆ.

‘ಸರ್ಕಾರದ ಈ ತೀರ್ಮಾನ ತಾರತಮ್ಯದಿಂದ ಕೂಡಿದೆ’ ಎಂದು ಅಸಮಧಾನ ವ್ಯಕ್ತಪಡಿಸಿರುವ ಅವರು, ‘ಸಂಘದ 2,500ಕ್ಕೂ ಹೆಚ್ಚು ಸದಸ್ಯರಿಗೆ ತಮ್ಮ ಉದ್ಯಮಕ್ಕೆ ಬೀಗ ಹಾಕುವ ಹೊರತಾಗಿ ಬೇರೆ ಆಯ್ಕೆಯೇ ಉಳಿದಿಲ್ಲ’ ಎಂದಿದ್ದಾರೆ.

‘ಪ್ಲಾಸ್ಟಿಕ್‌ ಉತ್ಪನ್ನಗಳನ್ನು ನಿಷೇಧಿಸುವುದರಿಂದ ರಾಜ್ಯದ ಜಿಡಿಪಿ ಮೇಲೆ ತೀವ್ರತರದ ಪರಿಣಾಮ ಉಂಟಾಗುವುದು. ಈ ಕ್ಷೇತ್ರವು ಬ್ಯಾಂಕುಗಳಲ್ಲಿ ಹೊಂದಿರುವ ಸಾಲ ಮರುಪಾವತಿಯಾಗದೇ ಬ್ಯಾಂಕುಗಳಲ್ಲಿ ಅನುತ್ಪಾದಕ ಸಾಲದ ಪ್ರಮಾಣ ಹೆಚ್ಚಾಗುವುದು’ ಎಂದು ಪ್ಲಾಸ್ಟಿಕ್‌ ಉದ್ಯಮದಲ್ಲಿ ನಿರತರಾದವರು ಅಭಿಪ್ರಾಯಪಡುತ್ತಾರೆ.

ಇನ್ನು, ರಾಜ್ಯದಲ್ಲಿರುವ ಚಿಲ್ಲರೆ ಮಾರಾಟಗಾರರು ಸಹ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ‘ಒಂದು ಕಡೆ ಹಣಕಾಸು ಮುಗ್ಗಟ್ಟು ಎದುರಾದರೆ, ಮತ್ತೊಂದೆಡೆ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಚಿಲ್ಲರೆ ಮಾರಾಟಗಾರರು ಆತಂಕ ವ್ಯಕ್ತಪಡಿಸುತ್ತಾರೆ.

ಇನ್ನೊಂದೆಡೆ ಗ್ರಾಹಕರು ಸಹ, ‘ಸರ್ಕಾರದ ಇಂತಹ ಕ್ರಮದ ಔಚಿತ್ಯ ಏನು’ ಎಂದು ಪ್ರಶ್ನಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !