ವಾಮಾಚಾರ ಶಂಕೆ: ಯುವಕನ ಥಳಿಸಿ ಸುಟ್ಟ ಜನ

ಹೈದರಾಬಾದ್: ವಾಮಾಚಾರ ಶಂಕೆಯ ಮೇಲೆ 24 ವರ್ಷದ ಯುವಕನನ್ನು ಥಳಿಸಿ, ಬೆಂಕಿಹಚ್ಚಿ ಸುಟ್ಟುಹಾಕಿದ ಘಟನೆ ತೆಲಂಗಾಣದ ಶಮೀರ್‌ಪುರ ಸಮೀಪದ ಅದ್ರಸಪಲ್ಲಿ ಗ್ರಾಮದಲ್ಲಿ ಬುಧವಾರ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.
45 ವರ್ಷದ ಲಕ್ಷ್ಮಿ ಎಂಬುವರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೆ ಮಹಿಳೆ ಸಾವಿಗೆ ಅದೇ ಗ್ರಾಮದ ಯುವಕ ಬೋಯಿನಿ ಆಂಜನೇಯಲು ಮಾಡಿದ್ದ ವಾಮಾಚಾರ ಕಾರಣ ಎಂದು ಆಕೆಯ ಸಂಬಂಧಿಕರು ಶಂಕಿಸಿದ್ದರು. ಸ್ಥಳಕ್ಕೆ ಬಂದ ಬೋಯಿನಿಯನ್ನು ಹಿಡಿದು ಥಳಿಸಿ ಸಾಯಿಸಿದ ಸಂಬಂಧಿಕರು, ಮಹಿಳೆಯ ಚಿತೆಗೇ ದೇಹವನ್ನು ಎಸೆದು ಸುಟ್ಟುಹಾಕಿದ್ದರು ಎಂದು ಶಮೀರ್‌ಪೇಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.