ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾಂಕಾ ಗಾಂಧಿಯನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ದ ವ್ಯಕ್ತಿಗೆ ₹6,300 ದಂಡ

Last Updated 30 ಡಿಸೆಂಬರ್ 2019, 4:44 IST
ಅಕ್ಷರ ಗಾತ್ರ

ಲಖನೌ: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಅವರನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋದ ವ್ಯಕ್ತಿಗೆ ಲಖನೌ ಟ್ರಾಫಿಕ್‌ ಪೊಲೀಸರು ₹6,300 ದಂಡ ವಿಧಿಸಿದ್ದಾರೆ.

ಸಿಎಎ ವಿರುದ್ಧ ನಡೆಸಿದ ಪ್ರತಿಭಟನೆಗಾಗಿ ಬಂಧಿತರಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಎಸ್‌.ಆರ್.ದರಪುರಿ ಅವರ ನಿವಾಸಕ್ಕೆ ಪ್ರಿಯಾಂಕಾ ಗಾಂಧಿ ಶನಿವಾರ ಹೋಗುತ್ತಿದ್ದಾಗ ಪೊಲೀಸರು ಅವರನ್ನು ತಡೆದರು.

ಪೊಲೀಸರಿಗೆ ಸಡ್ಡು ಹೊಡೆದು ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಮುಖಂಡ ಧೀರಜ್‌ ಗುಜ್ಜರ್‌ ಅವರ ದ್ವಿಚಕ್ರ ವಾಹನದಲ್ಲಿ ಅಧಿಕಾರಿಯ ಮನೆಗೆ ಹೋದರು. ಹೆಲ್ಮೆಟ್ ಇಲ್ಲದೆ ವಾಹನ ಚಲಾವಣೆ ಮಾಡಿದ್ದಕ್ಕಾಗಿ ಇಲ್ಲಿನ ಪೊಲೀಸರು ಧೀರಜ್‌ ಅವರಿಗೆ ದಂಡ ವಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT