ಸೋಮವಾರ, ಮಾರ್ಚ್ 8, 2021
27 °C

ಹಿಮಾಚಲ ಪ್ರದೇಶ: ಭೂಕುಸಿತಕ್ಕೆ ಮನಾಲಿ–ಲೇಹ್ ಹೆದ್ದಾರಿ ಬಂದ್‌

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ಉತ್ತರಾಖಂಡ, ಮನಾಲಿ: ಉತ್ತರಾಖಂಡ, ಹಿಮಾಚಲ ಪ್ರದೇಶ, ಮಧ್ಯಪ್ರದೇಶದಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಮಾಚಲ ಪ್ರದೇಶ ಮರಾಹಿ ಎಂಬಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು, ಮನಾಲಿ–ಲೇಹ್‌ ಹೆದ್ದಾರಿ ಬಂದ್‌ ಆಗಿದೆ. 

ಬೃಹತ್‌ಗಾತ್ರದ ಕಲ್ಲಿನ ಚಪ್ಪಡಿಗಳು, ಬಂಡೆಗಳು ರಸ್ತೆಗೆ ಬಿದ್ದಿವೆ. ಇದರಿಂದ ಸ್ಥಳೀಯರು ಸೇರಿದಂತೆ ಪ್ರವಾಸಿಗರ ಸಂಚಾರಕ್ಕೆ ಅಡ್ಡಿಯಾಗಿದೆ.

ಹಿಮಾಚಲ ಪ್ರದೇಶದ ಮಾಂಡಿ ಜಿಲ್ಲೆಯಲ್ಲಿ ಉಹ್ಲಿ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ.

ಉತ್ತರಾಖಂಡದ ಹೆದ್ದಾರಿ 94ರಲ್ಲಿ ಹಿಂಡೋಲಖಾಲ್‌ ಸಮೀಪ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಸಂಚಾರವನ್ನು ನಿರ್ಭಂಧಿಸಲಾಗಿದ್ದು, ಯಂತ್ರಗಳ ಸಹಾಯದಿಂದ ಕಲ್ಲು, ಮಣ್ಣು ತೆರವುಗೊಳಿಸಲಾಗಿತ್ತಿದೆ.

ರಾಜಸ್ಥಾನದಲ್ಲಿಯೂ ಭಾರಿ ಮಳೆಯಾಗಿದ್ದು, ಶಿವಾನ, ಜಖಹಾಮ ಮತ್ತಿರ ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿವೆ.

ಮಧ್ಯಪ್ರದೇಶದಲ್ಲಿ ಭಾರಿ ಮಳೆಗೆ ಸಿವಾನ್‌ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ಪ್ರವಾಹದ ನೀರಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿ ಮರದ ಕೊಂಬೆ ಹಿಡಿದು ರಕ್ಷಣೆ ಪಡೆದಿದ್ದ. ಈ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. 
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು