ಗುರುವಾರ , ಆಗಸ್ಟ್ 22, 2019
27 °C
ವಾಡಿಕೆಯಂತೆ ಜೂ.1ಕ್ಕೆ ಪ್ರವೇಶವಾಗಬೇಕು

ಮುಂಗಾರು ಪ್ರವೇಶ ಇನ್ನಷ್ಟು ವಿಳಂಬ

Published:
Updated:

ನವದೆಹಲಿ: ಪ್ರಸಕ್ತ ವರ್ಷ ದಲ್ಲಿ ನೈರುತ್ಯ ಮುಂಗಾರು ಮಾರುತದ ಪ್ರವೇಶ ವಿಳಂಬವಾಗಲಿದ್ದು, ಕೇರಳಕ್ಕೆ ಜೂನ್ 6 ರಂದು ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಮುನ್ಸೂಚನೆ ನೀಡಿದೆ. 

ವಾಡಿಕೆಯಂತೆ ಜೂನ್ 1ಕ್ಕೆ ಮುಂಗಾರು ಕೇರಳ ಪ್ರವೇಶಿಸಿ ಮುಂದುವರಿಯಬೇಕು. ಈ ವರ್ಷ ಜೂನ್ 6ಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನು ಐಎಂಡಿ ನೀಡಿದ್ದು, ಈ ದಿನಕ್ಕಿಂತ ನಾಲ್ಕು ದಿನ ಮುಂಚಿತವಾಗಿ ಅಥವಾ ತಡವಾಗಿ ಮಾರುತಗಳ ಪ್ರವೇಶವಾಗಬಹುದು ಎಂದು ಇಲಾಖೆ ತಿಳಿಸಿದೆ. ನೈರುತ್ಯ ಮುಂಗಾರು ಮಾರುತವು ಮೇ 18–19ರಂದು ಅಂಡಮಾನ್‌ ಸಮುದ್ರ ಮತ್ತು ನಿಕೋಬಾರ್ ದ್ವೀಪಗಳನ್ನು ದಾಟಿ ಮುಂದುವರಿಯಲು ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಐಎಂಡಿ ತಿಳಿಸಿದೆ. 

ಮಂಗಳವಾರ ಹವಾಮಾನ ವಿಶ್ಲೇಷಣಾ ಖಾಸಗಿ ಸಂಸ್ಥೆ ಸ್ಕೈಮೆಟ್ ಜೂನ್ 4ರಂದು ಮುಂಗಾರು ಮಾರುತ ಕೇರಳ ಕರಾವಳಿ ಪ್ರವೇಶಿಸಲಿವೆ ಎಂದು ಮುನ್ಸೂಚನೆ ನೀಡಿತ್ತು.

ಮಳೆ ಮಾಹಿತಿ...

2014ರಿಂದ ಸತತ 3 ವರ್ಷ ಮುಂಗಾರು ಪ್ರವೇಶ ವಿಳಂಬವಾಗಿತ್ತು. 2014ರಲ್ಲಿ ಜೂನ್ 5ಕ್ಕೆ, 2015ರಲ್ಲಿ ಜೂನ್ 6ಕ್ಕೆ ಹಾಗೂ 2016ರಲ್ಲಿ ಜೂನ್ 8ಕ್ಕೆ ಮುಂಗಾರು ಮಾರುತವು ಕೇರಳ ಪ್ರವೇಶಿಸಿತ್ತು. ಮುಂಗಾರು ಪ್ರವೇಶ ವಿಳಂಬದಿಂದ ಮಳೆ ಕೊರತೆ ಆಗಲಿದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. 2017ರಲ್ಲಿ ಮೇ 30ರಂದು ಹಾಗೂ 2018ರಲ್ಲಿ ಮೇ 29ರಂದೇ ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. ಹೀಗಿದ್ದರೂ, ಆ ಎರಡು ವರ್ಷವೂ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು.

Post Comments (+)