ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರದಲ್ಲೇ ಮಸೂದ್‌ ಅಜರ್‌ಗೆ ಜಾಗತಿಕ ಭಯೋತ್ಪಾದಕ ಹಣೆಪಟ್ಟಿ?

ವಿಶ್ವಸಂಸ್ಥೆಯ ಮೇ 1ರ ಸಭೆಯಲ್ಲಿ ಚೀನಾ ತಡೆ ಹಿಂಪಡೆಯುವ ಸಾಧ್ಯತೆ
Last Updated 30 ಏಪ್ರಿಲ್ 2019, 3:07 IST
ಅಕ್ಷರ ಗಾತ್ರ

ನವದೆಹಲಿ: ಜೈಷ್‌–ಎ-ಮೊಹಮ್ಮದ್‌ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ನಿರ್ಣಯಕ್ಕೆ ನೀಡಿದ್ದ ತಡೆಯನ್ನುಚೀನಾ ಬುಧವಾರ ನಡೆಯುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಹಿಂಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

‘ಮಾರ್ಚ್‌ 13ರಂದು ಅಮೆರಿಕ, ಬ್ರಿಟನ್‌, ಫ್ರಾನ್ಸ್‌ ದೇಶಗಳು ಬೆಂಬಲ ಸೂಚಿಸಿದ್ದ ಪ್ರಸ್ತಾವನೆಗೆ ನೀಡಿದ್ದ ತಾಂತ್ರಿಕ ತಡೆಯನ್ನು ಚೀನಾ ಹಿಂಪಡೆಯಲಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೀನಾ ಹೊರತುಪಡಿಸಿ ಇತರೆ ದೇಶಗಳು ಭಾರತದ ನಡೆಗೆ ಬೆಂಬಲ ಸೂಚಿಸಿದ್ದವು. ಚೀನಾ ಕೂಡ ತಡೆ ಹಿಂಪಡೆದು, ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಇದೊಂದು ಪ್ರಮುಖ ರಾಜತಾಂತ್ರಿಕ ಗೆಲುವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರುವರಿ 14ರಂದು ಮಸೂದ್‌ ಅಜರ್‌ ನೇತೃತ್ವದ ಜೈಷೆ–ಎ– ಮೊಹಮ್ಮದ್‌ ಉಗ್ರ ಸಂಘಟನೆ ಪುಲ್ವಾಮಾದಲ್ಲಿ ಆತ್ಮಹತ್ಯೆ ಬಾಂಬ್ ದಾಳಿ ನಡೆಸಿ 40 ಯೋಧರನ್ನು ಹತ್ಯೆ ಮಾಡಿತ್ತು. ಈ ಹಿನ್ನೆಯಲ್ಲಿ ಭಾರತ, ಜೈಷೆ–ಎ– ಮೊಹಮ್ಮದ್‌ ಉಗ್ರ ಸಂಘಟನೆಯನ್ನು ಜಾಗತಿಕವಾಗಿನಿಷೇಧಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಬಲವಾದ ವಾದ ಮಂಡಿಸಿತ್ತು.

ಚೀನಾದ ವಿರೋಧಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.ಚೀನಾ ನಡೆ ತೀವ್ರ ನಿರಾಸೆ ಉಂಟುಮಾಡಿದೆ,ಜೈಷ್‌–ಎ-ಮೊಹಮ್ಮದ್‌ ಉಗ್ರ ಸಂಘಟನೆ ಭಾರತದ ನೆಲದಲ್ಲಿ ನಡೆಸಿರುವ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಸೂಕ್ತ ಪುರಾವೆಗಳು ಇದ್ದರೂ ಚೀನಾದ ಈ ನಡೆ ಅಸಮಾಧಾನ ತಂದಿದೆ ಎಂದು ಭಾರತ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT