ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಯ್ಡಾ: ಶಾಲಾ ಸಿಬ್ಬಂದಿ ಆತ್ಮಹತ್ಯೆ

Last Updated 16 ಆಗಸ್ಟ್ 2019, 12:22 IST
ಅಕ್ಷರ ಗಾತ್ರ

ನೋಯ್ಡಾ(ಉತ್ತರ ಪ್ರದೇಶ): ಇಲ್ಲಿನ ಶಾಲೆಯೊಂದರಮಹಿಳಾ(36) ಸಿಬ್ಬಂದಿಯೊಬ್ಬರು ಶಾಲೆಯಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿರವ ಬಗ್ಗೆ ಗುರುವಾರ ವರದಿಯಾಗಿದೆ.

ಶಾಲೆಯಲ್ಲಿ ಸ್ವಚ್ಚತಾ ಕೆಲಸ ಮಾಡುತ್ತಿದ್ದಮಹಿಳೆ, ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ತನಿಖೆ ಪ್ರಗತಿಯಲ್ಲಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಇರಬಹುದೆಂದು ತನಿಖಾಧಿಕಾರಿ ಸ್ವೇತಬ್‌ ಪಾಂಡೆ ತಿಳಿಸಿದ್ದಾರೆ.

ಆದರೆ, ಮಹಿಳೆಯ ಕುಟುಂಬದವರು ಕೊಲೆಯಾಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.

‘ನನ್ನ ಹೆಂಡತಿ ಕಳೆದ ನಾಲ್ಕು ತಿಂಗಳಿನಿಂದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಎಂದಿನಂತೆ ಬೆಳಗ್ಗೆಯೂ ಮನೆಯಿಂದ ಹೊರಟಾಗ ಸಂತಸವಾಗಿಯೇ ಇದ್ದಳು.ಶಾಲಾ ಆಡಳಿತ ಮಂಡಳಿಯವರು ನನಗೆಸಂಜೆ 6,30ರಲ್ಲಿ ವಿಷಯ ತಿಳಿಸಿದರು. ನಾನು ನೋಡಿದಾಗಲೂ ಶವ ಮರದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲೇ ಇತ್ತು. ಆಕೆಯನ್ನು ಯಾರೊ ಕೊಲೆ ಮಾಡಿರಬಹುದು’ ಎಂದು ಮೃತ ಮಹಿಳೆಯಪತಿ ರಾಕೇಶ್ ಶ್ರೀವತ್ಸವ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT