ಭುಜ್: ಇಲ್ಲಿನ ಶ್ರೀಶಹಜಾನಂದ ಬಾಲಕಿಯರ ಕಾಲೇಜಿನಲ್ಲಿ (ಎಸ್‌ಎಸ್‌ಜಿಐ) ವಾರದ ಹಿಂದೆ 60 ವಿದ್ಯಾರ್ಥಿನಿಯರಿಗೆ, ಅವರು ಋತುಸ್ರಾವಕ್ಕೆ ಒಳಗಾಗಿದ್ದಾರೆಯೇ ಎಂಬುದನ್ನು ತಿಳಿಯಲು ಬಲವಂತವಾಗಿ ಅವರ ಉಡುಪು ತೆಗೆಸಿ ಪರಿಶೀಲಿಸಿದ್ದರು ಎಂಬ ಪ್ರಕರಣದ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಪಿಟಿಐ ಸ್ವಾಮಿನಾರಾಯಣ ದೇವಸ್ಥಾನದ ಟ್ರಸ್ಟ್ ಕಾಲೇಜು ನಡೆಸುತ್ತಿದೆ. ಕ್ರಾಂತಿಗುರು ಶ್ಯಾಮ್‌ಜೀ ಕೃಷ್ಣವರ್ಮಾ ಕುಛ್ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದಿದೆ.
ಕಾಲೇಜಿನ ಪ್ರಾಚಾರ್ಯ ರಿತಾ ರಾಣಿಂಗಾ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ರಾಮಿಲಿಬೆನ್ ಹಿರಾಣಿ, ಗುಮಾಸ್ತರಾದ ನೈನಾ ಗೊರಸಿಯ ಮತ್ತು ಅನಿತಾ ಚೌಹಾಣ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಐಪಿಸಿ ಕಾಯ್ದೆಯನ್ವಯ ಸುಲಿಗೆ, ಅಗೌರವ, ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.