ನವದೆಹಲಿ: ದೇಶದ ಮೆಟ್ರೊ ರೈಲು ಪ್ರಯಾಣಿಕರು ಇನ್ನು ಮುಂದೆ ಭಾರಿ ತೂಕದ ಲಗೇಜ್ ಒಯ್ಯಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಅನುಮತಿ ನೀಡಿದೆ.

ಪ್ರಸ್ತುತ ಮೆಟ್ರೊದಲ್ಲಿ ಲಗೇಜ್ ಕೊಂಡೊಯ್ಯಲು ಇದ್ದ 15 ಕೆ.ಜಿ. ತೂಕದ ಮಿತಿಯನ್ನು 25 ಕೆ.ಜಿಗೆ ಹೆಚ್ಚಿಸಲಾಗಿದೆ. ಆದರೆ ಮೆಟ್ರೊ ರೈಲು ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು.

80x50x30 ಸೆಂ.ಮೀ. ಗಾತ್ರದ, 25 ಕೆ.ಜಿ. ತೂಕದ ಒಂದು ಬ್ಯಾಗ್‌ಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಪ್ರತ್ಯೇಕವಾಗಿ ಇಷ್ಟು ತೂಕದ ಲಗೇಜ್ ಒಯ್ಯುವಂತಿಲ್ಲ. ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಮೆಟ್ರೊ ರೈಲುಗಳಲ್ಲಿ ಮಾತ್ರ ತೂಕದ ಮಿತಿಯನ್ನು 32 ಕೆ.ಜಿ.ಗೆ ಹೆಚ್ಚಿಸಲಾಗಿದೆ. ಆದರೆ ಇಲ್ಲಿ ಸಹ ಬಿಡಿಬಿಡಿಯಾಗಿ ಇಷ್ಟು ತೂಕದ ಲಗೇಜ್ ಕೊಂಡೊಯ್ಯಲು ಅನುಮತಿ ಇಲ್ಲ.

ಮೆಟ್ರೊ ರೈಲು (ಲಗೇಜ್ ಮತ್ತು ಟಿಕೆಟ್) ನಿಯಮ 2014ಕ್ಕೆ ತಿದ್ದುಪಡಿ ತಂದಿರುವ ಸರ್ಕಾರ, ಈ ಕುರಿತು ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.