ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ | ಬಿಸಿಲ ಬೇಗೆಗೆ ಬಸವಳಿದು 300 ಕಿ.ಮೀ ನಡೆದಿದ್ದ ಒಡಿಶಾದ ಕಾರ್ಮಿಕ ಸಾವು

Last Updated 13 ಮೇ 2020, 8:19 IST
ಅಕ್ಷರ ಗಾತ್ರ

ಹೈದರಾಬಾದ್‌: ಲಾಕ್‌ಡೌನ್ ಹಿನ್ನೆಲೆಯಲ್ಲಿ ತೆಲಂಗಾಣದಿಂದ 300 ಕಿ.ಮೀ ದೂರ ನಡೆದುಕೊಂಡು ಹೊರಟಿದ್ದ ಒಡಿಶಾದ 21 ವರ್ಷದ ಕಾರ್ಮಿಕನೊಬ್ಬ ಬಿಸಿಲ ಬೇಗೆಗೆ ಬಸವಳಿದು ಮೃತಪಟ್ಟಿದ್ದಾನೆ.

ಮೃತ ಕಾರ್ಮಿಕ ಸೇಹ್ನಿತರೊಂದಿಗೆ ಹೈದರಾಬಾದ್‌ನಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದು, ಒಡಿಶಾದ ಮಲ್ಕಂಗಿರಿ ಜಿಲ್ಲೆಗೆ ತೆರಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರಾಚಲಂ ತಲುಪಿದಾಗ ಕಾರ್ಮಿಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು, ವಾಂತಿ ಮಾಡಿಕೊಂಡು ರಸ್ತೆಯಲ್ಲೇ ಕುಸಿದುಬಿದ್ದಿದ್ದಾನೆ ಎಂದು ಸ್ನೇಹಿತರು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರ್ಮಿಕ ಬಿಸಿಲಿನ ತೀವ್ರತೆಗೆ ಬಳಲಿ ಮೃತಪಟ್ಟಿರಬಹುದು ಎಂದು ಆಸ್ಪತ್ರೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತ,ಗುಂಪಿನಲ್ಲಿದ್ದ ಸ್ನೇಹಿತರು ಸೋಮವಾರ ಮಧ್ಯಾಹ್ನದಿಂದ ಏನನ್ನೂ ತಿಂದಿರಲಿಲ್ಲ ಎಂದು ತಿಳಿಸಿದ್ದಾರೆ.

ಘಟನೆ ಕುರಿತು ಕಾರ್ಮಿಕನಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದು, ಮೃತದೇಹವನ್ನು ಮಲ್ಕಂಗಿರಿಗೆ ಕೊಂಡೊಯ್ಯಲು ವಾಹನ ವ್ಯವಸ್ಥೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT