ರಾಹುಲ್ ಗಾಂಧಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸಿ: ಕೇಂದ್ರ ಸಚಿವ

7

ರಾಹುಲ್ ಗಾಂಧಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸಿ: ಕೇಂದ್ರ ಸಚಿವ

Published:
Updated:

ಪಟ್ನಾ: ‘ರಾಹುಲ್ ಗಾಂಧಿ ಹುಚ್ಚ. ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು’ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಛೌಬೆ ಕಿಡಿಕಾರಿದ್ದಾರೆ.

ಇಲ್ಲಿನ ಸಸಾರಾಮ್‌ನಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಆಗಸವಿದ್ದಂತೆ. ಈ ರಾಹುಲ್ ಗಾಂಧಿ ತಿಪ್ಪೆಯಲ್ಲಿನ ಹುಳು. ರಾಹುಲ್ ತನ್ನನ್ನು ತಾನು ಬುದ್ಧಿವಂತ, ಮಹಾಚತುರ ಎಂದು ಕರೆದುಕೊಳ್ಳುತ್ತಾನೆ. ಮೋದಿ ಅವರನ್ನು ಸುಳ್ಳ ಎಂದು ಕರೆಯುತ್ತಾನೆ. ತಲೆಕೆಟ್ಟವರು ಮಾತ್ರ ಇಂತಹ ಮಾತುಗಳನ್ನು ಆಡಬಲ್ಲರು. ಹೀಗಾಗಿ ರಾಹುಲ್ ಗಾಂಧಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು’ ಎಂದು ಛೌಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರಗಳ ತಾಯಿ. ಮಹಾಘಟಬಂಧನವು ಭ್ರಷ್ಟಾಚಾರಿಗಳ ಬಂಧ’ ಎಂದೂ ಅವರು ಕಿಡಿಕಾರಿದ್ದಾರೆ.

ಛೌಬೆ ಈ ರೀತಿಯ ಹೇಳಿಕೆ ನೀಡಿದ್ದು ಇದೇ ಮೊದಲಲ್ಲ. ‘ಸೋನಿಯಾ ಗಾಂಧಿ ಮಹಾಭಾರತದ ಪೂತನಿ’ ಎಂದು ಛೌಬೆ ಈ ಹಿಂದೆ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !