ಬುಧವಾರ, ಏಪ್ರಿಲ್ 1, 2020
19 °C

ಇಂಡಿಯನ್ 2 ಚಿತ್ರದ ಶೂಟಿಂಗ್ ವೇಳೆ ಕ್ರೇನ್ ಕುಸಿದು ಬಿದ್ದು ಅವಘಡ: 3 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

shooting set

ಚೆನ್ನೈ: ಜನಪ್ರಿಯ ನಟ ಕಮಲ್ ಹಾಸನ್ ಹಾಗೂ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಇಂಡಿಯನ್ 2' ಚಿತ್ರದ ಶೂಟಿಂಗ್‌ ವೇಳೆ ಕ್ರೇನ್ ಕುಸಿದು ಬಿದ್ದು ಸಂಭವಿಸಿದ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದಾರೆ. 

ಚೆನ್ನೈ ನಗರದ ಹೊರವಲಯದಲ್ಲಿ ಬುಧವಾರ ರಾತ್ರಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಈ  ದುರ್ಘಟನೆ ಸಂಭವಿಸಿದ್ದು 10 ಮಂದಿಗೆ ಗಾಯಗಳಾಗಿವೆ. ಕ್ರೇನ್‌ಗೆ ಕಟ್ಟಿದ ಹಗ್ಗ ತುಂಡಾಗಿ ಬಿದ್ದಾಗ, ಕ್ರೇನ್‌ನ ಅಡಿಗೆ ಸಿಲುಕಿ ಪ್ರಾಣಾಪಾಯ ಸಂಭವಿಸಿದೆ ಎನ್ನಲಾಗಿದೆ.

ಸಹಾಯಕ ನಿರ್ದೇಶಕ ಕೃಷ್ಣ ಮತ್ತು ಪ್ರೊಡಕ್ಷನ್ ಅಸಿಸ್ಟೆಂಟ್ ಮಧು ಮತ್ತು ಆರ್ಟ್ ಅಸಿಸ್ಟೆಂಟ್ ಚಂದ್ರನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 10ಕ್ಕಿಂತ ಹೆಚ್ಚು ಮಂದಿಗೆ ಗಾಯಗಳಾಗಿವೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ. 

ಮೂವರು ಸಾವಿಗೀಡಾಗಿದ್ದಾರೆ ಎಂದು ಹೇಳಿದ ಪೊಲೀಸರು ಇಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ.

ಚೆನ್ನೈ ಹೊರವಲಯ ಪೂನಮಲ್ಲಿಯಲ್ಲಿರುವ  ಇವಿಪಿ ಫಿಲ್ಮ್ ಸಿಟಿಯಲ್ಲಿ ಬುಧವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ.  1996ರಲ್ಲಿ ತೆರೆಕಂಡ ಬ್ಲಾಕ್‌ಬಸ್ಟರ್ ಸಿನಿಮಾ ಇಂಡಿಯನ್‌ನ ಮುಂದುವರಿದ ಭಾಗವಾಗಿದೆ ಇಂಡಿಯನ್ 2.  ಈ ಘಟನೆ ಸಂಭವಿಸಿದಾಗ ಕಮಲ್ ಹಾಸನ್ ಮತ್ತು ನಿರ್ದೇಶಕ ಎಸ್. ಶಂಕರ್ ಸ್ಥಳದಲ್ಲೇ ಇದ್ದರು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು