ಸೋಮವಾರ, ಆಗಸ್ಟ್ 26, 2019
27 °C
ಐವರ ಬಂಧನ

ಉತ್ತರ ಪ್ರದೇಶ: ಗೋಮಾಂಸ ಸಾಗಣೆ ಶಂಕೆ, ವ್ಯಕ್ತಿ ಮೇಲೆ ಗುಂಪು ಹಲ್ಲೆ

Published:
Updated:

ಉತ್ತರ ಪ್ರದೇಶ: ದನದ ಮಾಂಸ ಸಾಗಣೆಯ ಗಾಳಿಸುದ್ದಿ ಹರಡಿ, ವ್ಯಕ್ತಿಯೊಬ್ಬರ ಮೇಲೆ ಗ್ರೇಟರ್‌ ನೊಯ್ಡಾದಲ್ಲಿ ಗುಂಪೊಂದು ಹಲ್ಲೆ ನಡೆಸಿದೆ. 

ಗಜಿಯಾಬಾದ್‌ನ ಮಹಾನಗರ ಪಾಲಿಕೆಯ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಮಹೇಂದ್ರ ಹಲ್ಲೆಗೊಳಗಾದವರು. ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಶುಕ್ರವಾರ ರಾತ್ರಿ 9 ಗಂಟೆಯ ವೇಳೆಗೆ ಮಹೇಂದ್ರ ಅವರು, ಮೂರು ದನಗಳು, 2 ಕರು ಹಾಗೂ 12 ಎಮ್ಮೆಯ ಕರುಗಳ ಮೃತದೇಹಗಳನ್ನು ವಿಲೇವಾರಿಗಾಗಿ, ಘಟಕಕ್ಕೆ ಕೊಂಡೊಯ್ಯುತ್ತಿದ್ದರು. ಇದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳ ಒಪ್ಪಿಗೆಯನ್ನೂ ಪಡೆಯಲಾಗಿತ್ತು. ಆದರೆ ಗೌರ್‌ ನಗರದಲ್ಲಿ ವಾಹನವನ್ನು ಅಡ್ಡಗಟ್ಟಿದ ಕಿಡಿಗೇಡಿಗಳು, ಚಾಲಕನ ಮೇಲೂ ಹಲ್ಲೆ ನಡೆಸಿದ್ದಾರೆ. ಅನುಮತಿ ಪಡೆದು ವಿಲೇವಾರಿ ಮಾಡುತ್ತಿದ್ದರೂ ಹಲ್ಲೆ ನಡೆಸಲಾಗಿದೆ. ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

Post Comments (+)