ಸೋಮವಾರ, ಮಾರ್ಚ್ 1, 2021
30 °C

ಬಿಜೆಪಿ ಫಂಡ್‍ಗೆ ₹1000 ದೇಣಿಗೆ ನೀಡಿದ ಅಮಿತ್ ಶಾ, ಮೋದಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಚುನಾವಣೆಗಾಗಿ ಪಕ್ಷದ ನಿಧಿಗೆ ದೇಣಿಗೆ ನೀಡಲು ಧನಿಕರನ್ನು ಅವಲಂಬಿಸುವುದನ್ನು ಕಡಿಮೆ ಮಾಡಬೇಕು ಎಂಬ ಸಂದೇಶವನ್ನು ಬಿಜೆಪಿ ಅಧ್ಯಕ್ಷ  ಅಮಿತ್ ಶಾ ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ.

ದೀನ್ ದಯಾಳ್ ಉಪಾಧ್ಯಾಯ್ ಅವರ 51ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಪ್ರಾಮಾಣಿಕತೆಯಲ್ಲಿ ಬಿಜೆಪಿ ಇತರ ಪಕ್ಷಗಳಿಗೆ ಮಾದರಿಯಾಗಬೇಕು ಎಂದಿದ್ದಾರೆ.

ಪಕ್ಷವೊಂದು ತಮ್ಮ ಕಾರ್ಯಕರ್ತರ ದೇಣಿಗೆಯಿಂದಲೇ ಕಾರ್ಯವೆಸಗಬೇಕೇ ವಿನಾ, ಧನಿಕರ, ಬಿಲ್ಡರ್‌ಗಳ ಮತ್ತು ಕಪ್ಪುಹಣ ಹೊಂದಿರುವವ ದೇಣಿಗೆಯಿಂದಲ್ಲ ಎಂದು  ಶಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವುದಕ್ಕಿಂತ ಮುನ್ನ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಪಕ್ಷದ ಫಂಡ್‍ಗೆ ₹1000 ದೇಣಿಗೆ ನೀಡಿದ್ದಾರೆ.

ನೀವು ಕೂಡಾ ಪಕ್ಷದ ಫಂಡ್‍ಗೆ ದೇಣಿಗೆ ನೀಡಬೇಕು.  NaMo App ಮೂಲಕ ಇದು ಸುಲಭ. ನಾನೂ ದೇಣಿಗೆ ನೀಡಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು