ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಕೇವಲ 17 ಲಕ್ಷ ಜನರಿಂದ ಪ್ರಧಾನಿ ಮೋದಿ ಪೋಸ್ಟ್‌ ವೀಕ್ಷಣೆ

Last Updated 23 ಏಪ್ರಿಲ್ 2020, 16:40 IST
ಅಕ್ಷರ ಗಾತ್ರ

ನವದೆಹಲಿ: ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 4.47 ಕೋಟಿ ಜನ ಹಿಂಬಾಲಕರು(ಫಾಲೊವರ್ಸ್)‌ ಇದ್ದರೂ, ಅವರು ಅಪ್‌ಲೋಡ್‌ ಮಾಡುವ ಮಾಹಿತಿ, ಪೋಸ್ಟ್‌ಗಳನ್ನು ಕೇವಲ 17 ಲಕ್ಷ ಜನ ವೀಕ್ಷಿಸುತ್ತಿದ್ದಾರೆ.

ಬರ್ಸನ್‌ ಕಾನ್‌ ಆ್ಯಂಡ್‌ ವೂಲ್ಫಿ ಸಂಸ್ಥೆಯ ‘ಫೇಸ್‌ಬುಕ್‌ನಲ್ಲಿ ವಿಶ್ವದ ನಾಯಕರು’ 2020 ರ್‍ಯಾಂಕಿಂಗ್‌ನಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ 2.60ಕೋಟಿಫಾಲೊವರ್ಸ್‌ ಇದ್ದು, ಅವರ ಪೋಸ್ಟ್‌ಗಳನ್ನು ಕೇವಲ 8.77 ಲಕ್ಷ ಜನ ವೀಕ್ಷಿಸುತ್ತಿದ್ದಾರೆ. ಹೀಗಿದ್ದರೂ, ರ್‍ಯಾಂಕಿಂಗ್‌ನಲ್ಲಿ ಟ್ರಂಪ್‌ ಮುಂಚೂಣಿಯಲ್ಲಿದ್ದಾರೆ.

ಕಳೆದ 12 ತಿಂಗಳಲ್ಲಿ ಟ್ರಂಪ್‌ ಫೇಸ್‌ಬುಕ್‌ ಪೇಜ್‌ನಲ್ಲಿ 30.9 ಕೋಟಿ ಕಮೆಂಟ್‌ಗಳು, ಲೈಕ್ಸ್‌ ಹಾಗೂ ಶೇರ್ಸ್‌ಗಳು ದಾಖಲಾಗಿರುವುದೇ ಇದಕ್ಕೆ ಕಾರಣವಾಗಿದೆ. ಟ್ರಂಪ್‌ ನಂತರದ ಸ್ಥಾನದಲ್ಲಿ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್‌ಸೊನಾರೊ ಇದ್ದಾರೆ.

ಮೂರನೇ ಸ್ಥಾನದಲ್ಲಿ ನರೇಂದ್ರ ಮೋದಿಯಿದ್ದು, ಅವರ ಫೇಸ್‌ಬುಕ್‌ ಪೇಜ್‌ನಲ್ಲಿ 8.4 ಕೋಟಿ ಲೈಕ್ಸ್‌, ಕಮೆಂಟ್‌ಗಳು ದಾಖಲಾಗಿವೆ. ಫೇಸ್‌ಬುಕ್‌ನಲ್ಲಿ ಜನಪ್ರಿಯ ವಿಶ್ವ ನಾಯಕರ ಪಟ್ಟಿಯಲ್ಲಿ ಮೋದಿ ಅವರು ಮೊದಲನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ‘ಭಾರತದ ಪ್ರಧಾನ ಮಂತ್ರಿ’ ಅಧಿಕೃತ ಫೇಸ್‌ಬುಕ್ ಪೇಜ್‌ ನಾಲ್ಕನೇ ಸ್ಥಾನದಲ್ಲಿದೆ. ‌

ಸಂಸ್ಥೆಯು ರಾಷ್ಟ್ರದ ಮುಖ್ಯಸ್ಥರು, ಸರ್ಕಾರ ಹಾಗೂ ವಿದೇಶಾಂಗ ಸಚಿವರು ಸೇರಿದಂತೆ 721 ಫೇಸ್‌ಬುಕ್‌ ಪೇಜ್‌ಗಳ ಚಟುವಟಿಕೆಗಳನ್ನು ವಿಶ್ಲೇಷಿಸಿ ಈ ವರದಿ ತಯಾರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT