ಸೋಮವಾರ, ಡಿಸೆಂಬರ್ 16, 2019
17 °C

‘ಮೋದಿ–ಶಾ ಸಂಬಂಧ ಅನನ್ಯ’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಡುವಿನ ಸಂಬಂಧ ಆದರ್ಶಯುತ ಹಾಗೂ ಅನನ್ಯವಾದುದು’

–ಬಿಜೆಪಿಯ ತರಬೇತಿ ಹಾಗೂ ಪ್ರಕಟಣೆ ವಿಭಾಗದ ಸಹ ಸಂಚಾಲಕ ಆರ್. ಬಾಲಶಂಕರ್ ಅವರು ಬರೆದಿರುವ ‘ನರೇಂದ್ರ ಮೋದಿ: ಕ್ರಿಯೇಟಿವ್ ಡಿಸ್‌ರಪ್ಟರ್, ದಿ ಮೇಕರ್ ಆಫ್ ನ್ಯೂ ಇಂಡಿಯಾ’ ಎಂಬ ಪುಸ್ತಕದಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ. ಇವರು ಆರ್ಗನೈಸರ್ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು. 

ಈ ಪುಸ್ತಕವನ್ನು ಅಮಿತ್ ಶಾ ಅವರು ಸೋಮವಾರ ಬಿಡುಗಡೆ ಮಾಡಲಿದ್ದಾರೆ. 

ಶಾ ಅವರ ಮೇಲೆ ಮೋದಿ ಅವರಿಗೆ ಭಾರಿ ವಿಶ್ವಾಸವಿದ್ದು, ಅತ್ಯಂತ ಸವಾಲಿನ ಕೆಲಸಗಳನ್ನು ಅವರಿಗೆ ವಹಿಸುತ್ತಾರೆ. ಇತರೆ ಪಕ್ಷಗಳ ಅಧ್ಯಕ್ಷರಿಗೆ ಹೋಲಿಸಿದರೆ ಬಿಜೆಪಿ ಅಧ್ಯಕ್ಷರಾಗಿ ಶಾ ಅವರು ಹಲವು ದಾಖಲೆಗಳನ್ನು ಮಾಡಿದ್ದಾರೆ’ ಎಂದು ‘ಮೋದಿ–ಶಾ ತಂಡ’ ಎಂಬ ಅಧ್ಯಾಯದಲ್ಲಿ ಬರೆಯಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು