ಗುರುವಾರ , ಡಿಸೆಂಬರ್ 5, 2019
20 °C

ಕೋತಿಗಳಿಗೂ ಹಣ್ಣು ಬೇಡ, ಫ್ರೂಟಿ, ಸಮೋಸವೇ ಬೇಕು– ಹೇಮಾಮಾಲಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಧಾರ್ಮಿಕ ಕ್ಷೇತ್ರಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಅವು ಹಣ್ಣುಗಳ ಬದಲು ಫ್ರೂಟಿ, ಸಮೋಸ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿವೆ ಎಂದು ನಟಿ ಹಾಗೂ ಬಿಜೆಪಿ ಸಂಸದೆ ಹೇಮಾಮಾಲಿನಿ ಗುರುವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು ಬೃಂದಾವನ ಮತ್ತು ಮಥುರಾದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಅವುಗಳಿಗೆ ಮಥುರದಲ್ಲಿ ಪ್ರತ್ಯೇಕ ಪಾರ್ಕ್‌ ನಿರ್ಮಾಣ  ಮಾಡಬೇಕು ಎಂದು ಮನವಿ ಮಾಡಿದ್ದಾರೆ.  ಕೋತಿಗಳು ನೈಸರ್ಗಿಕವಾಗಿ ಗಿಡಗಳಲ್ಲಿ ಬಿಡುವ ಹಣ್ಣುಗಳನ್ನು ತಿನ್ನುತ್ತಿಲ್ಲ ಬದಲಿಗೆ ಮನುಷ್ಯರ ರೀತಿಯ ಆಹಾರ ಅಭ್ಯಾಸವನ್ನು ರೂಢಿಸಿಕೊಂಡಿದ್ದು ಅವು ಸಮೋಸ ತಿನ್ನುತ್ತಿವೆ. ಆದ್ದರಿಂದ ಕೋತಿಗಳ ಆರೋಗ್ಯದ ಸಲುವಾಗಿ ಕೋತಿಗಳ ಪಾರ್ಕ್‌ ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಧಾರ್ಮಿಕ ಸ್ಥಳಗಳಲ್ಲಿ ಕೋತಿಗಳು ಭಕ್ತರ ಕೈಯಲ್ಲಿರುವ ವಸ್ತುಗಳನ್ನು ಆಹಾರ ಎಂದು ಭಾವಿಸಿ ಕಿತ್ತುಕೊಳ್ಳುತ್ತಿವೆ. ಇವುಗಳ ಹಾವಳಿಯಿಂದ ಮನೆಯ ಆವರಣ ಹಾಗೂ ಉದ್ಯಾನಗಳಲ್ಲಿ ಮಕ್ಕಳು ಆಟವಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಮಾಮಾಲಿನಿ ಹೇಳಿದ್ದಾರೆ. 

ಕಾಡುಗಳ ನಾಶದಿಂದಾಗಿ ಕೋತಿಗಳಿಗೆ ಮನೆ ಇಲ್ಲದಂತಾಗಿ ಅವು ನಾಡಿಗೆ ಬಂದಿವೆ ಎಂದು ಎಲ್‌ಜೆಪಿ ಸಂಸದ ಚಿರಾಗ್‌ ಪಾಸ್ವಾನ್‌ ಹೇಳಿದ್ದಾರೆ.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು