ಮಂಗಳವಾರ, ಅಕ್ಟೋಬರ್ 15, 2019
26 °C

ಅಬ್ಧುಲ್ಲಾ ಭೇಟಿಗೆ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ನಿಯೋಗಕ್ಕೆ ಅನುಮತಿ

Published:
Updated:
ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಒಮರ್ ಅಬ್ಧುಲ್ಲಾ

ಶ್ರೀನಗರ: ಗೃಹಬಂಧನದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಒಮರ್ ಅಬ್ಧುಲ್ಲಾ ಅವರನ್ನು ಭಾನುವಾರ ಭೇಟಿಯಾಗಲು ಜಮ್ಮು ಮತ್ತು ಕಾಶ್ಮೀರದ ಆಡಳಿತ, ಪಕ್ಷದ ನಿಯೋಗಕ್ಕೆ ಅನುಮತಿ ನೀಡಿದೆ. 

‘ಪಕ್ಷದ ಹಂಗಾಮಿ ಅಧ್ಯಕ್ಷ ದೇವೇಂದ್ರ ಸಿಂಗ್ ರಾಣಾ ನೇತೃತ್ವದ ನಿಯೋಗ, ಪ‍ಕ್ಷದ ಮಾಜಿ ಶಾಸಕರ ಜೊತೆ ವಿಮಾನದ ಮೂಲಕ ಭಾನುವಾರ ಜಮ್ಮುವಿಗೆ ತಲುಪಲಿದ್ದಾರೆ’ ಎಂದು ಪಕ್ಷದ ವಕ್ತಾರ ಮದನ್ ಮಾಂಟೂ ಹೇಳಿದ್ದಾರೆ. ‌

ಪಕ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಭೇಟಿ ಮಾಡುವ ಸಲುವಾಗಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಗೆ ರಾಣಾ ಅವರು ಅನುಮತಿ ಕೋರಿದ್ದರು.

ಜಮ್ಮು ಮೂಲದ ನ್ಯಾಷನಲ್ ಕಾನ್ಫರೆನ್ಸ್ ನಾಯಕರ ಮೇಲಿದ್ದ ನಿರ್ಬಂಧವನ್ನು ತೆಗೆದು ಹಾಕಿದ ಎರಡು ದಿನಗಳ ಬಳಿಕ, ಜಮ್ಮು ಪಾಂತ್ರ್ಯದ ಹಿರಿಯ ಕಾರ್ಯಕರ್ತರು ಮತ್ತು ಜಿಲ್ಲಾಧ್ಯಕ್ಷರ ತುರ್ತು ಸಭೆಯಲ್ಲಿ ಅಬ್ದುಲ್ಲಾರನ್ನು ಭೇಟಿಯಾಗುವ ನಿರ್ಣಯ ಕೈಗೊಳ್ಳಲಾಯಿತು ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. 

ಎಂಬತ್ತೊಂಬತ್ತು ವರ್ಷದ ಫಾರೂಕ್ ಅಬ್ದುಲ್ಲಾ ಅವರು ಶ್ರೀನಗರದ ತಮ್ಮ ನಿವಾಸದಲ್ಲಿ ಗೃಹ ಬಂಧನ ದಲ್ಲಿದ್ದರೆ, ಅವರ ಮಗ ಒಮರ್ ಅಬ್ದುಲ್ಲಾ ರಾಜ್ಯ ಸರ್ಕಾರದ ಅತಿಥಿ ಗೃಹದಲ್ಲಿ ಗೃಹ ಬಂಧನದಲ್ಲಿರಿಸಲಾಗಿದೆ. 

Post Comments (+)