ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಮಹಿಳೆಯರಿವರು

Last Updated 11 ಫೆಬ್ರುವರಿ 2020, 14:41 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ವಿಧಾನಸಭೆಗೆ ಈ ಬಾರಿ ಎಂಟು ಮಹಿಳಾ ಶಾಸಕಿಯರು ಆಯ್ಕೆಯಾಗಿದ್ದಾರೆ. ಕಳೆದ ಬಾರಿ 6 ಶಾಸಕಿಯರಿದ್ದರು. ಈ ಬಾರಿ ಆಯ್ಕೆಯಾದವರಲ್ಲಿ ನಾಲ್ವರು ಮೊದಲ ಬಾರಿ ಗೆಲುವು ಸಾಧಿಸಿದವರಾಗಿದ್ದಾರೆ.

ಈ ಎಂಟು ಶಾಸಕಿಯರೂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದವರಾದ್ದು ಇವರ ಪೈಕಿಅತಿಶಿ ಮೊದಲ ಬಾರಿ ಶಾಸಕಿಯಾಗಿದ್ದಾರೆ. ಡೆಪ್ಯುಟಿ ಸ್ಪೀಕರ್ ಆಗಿದ್ದ ರಾಖಿ ಬಿರ್ಲಾ ಕೂಡಾ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್‌ನಿಂದ ಆಮ್ ಆದ್ಮಿ ಪಕ್ಷಕ್ಕೆ ಬಂದ ರಾಜಕುಮಾರಿ ಧಿಲ್ಲೊನ್ಮತ್ತು ಪ್ರೀತಿ ಥೋಮರ್ ವಿಧಾನಸಭೆಗೆ ಆಯ್ಕೆಯಾಗಿರುವ ಹೊಸ ನಾಯಕಿಯಾಗಿದ್ದಾರೆ.

ಎಎಪಿಶಾಸಕ ಜಗದೀಪ್ ಸಿಂಗ್ ಅವರ ಕ್ಷೇತ್ರವಾಗಿದ್ದ ಹರಿನಗರ್‌ನಲ್ಲಿ ಸ್ಪರ್ಧಿಸಿದ್ದ ಧಿಲ್ಲೋನ್, ಬಿಜೆಪಿಯ ತೇಜಿಂದರ್ ಪಾಲ್ ಸಿಂಗ್ ಬಗ್ಗಅವರನ್ನು ಪರಾಭವಗೊಳಿಸಿದ್ದಾರೆ. ಅದೇ ವೇಳೆ ಥೋಮರ್ ಅವರು ತ್ರಿನಗರದಲ್ಲಿ ಮತ್ತು ಧಾವಂತಿ ಚಂದೇಲಾ ಅಲರು ರಜೌರಿ ಗಾರ್ಡನ್‌ನಿಂದ ಗೆಲುವು ಸಾಧಿಸಿದ್ದಾರೆ.

ಹಾಲಿ ಶಾಸಕಿಯರಾದ ಪ್ರಮೀಳಾ ತೋಕಾಸ್, ಭಾವನಾ ಗೌರ್ ಮತ್ತು ಬಂದನಾ ಕುಮಾರಿ ಕೂಡಾ ಗೆಲುವಿನ ನಗೆ ಬೀರಿದ್ದಾರೆ.

ದೆಹಲಿಯ ಶಿಕ್ಷಣ ವ್ಯವಸ್ಥೆಗೆ ಹೊಸ ರೂಪ ನೀಡಲು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದ ಅತಿಶಿಯವರೇ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರಿಗೆ ಸಹಾಯ ಮಾಡಿದ್ದರು.ಹೀಗಿರುವಾಗಕೇಜ್ರಿವಾಲ್ ಸಚಿವ ಸಂಪುಟದಲ್ಲಿ ಇವರಿಗೆ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದೆ.
ಲೋಕಸಭಾ ಚುನಾವಣೆಯಲ್ಲಿಪೂರ್ವ ದೆಹಲಿಯಲ್ಲಿ ಸ್ಪರ್ಧಿಸಿದ್ದ ಅತಿಶಿಯನ್ನು ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ಪರಾಭವಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT