ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಸಂಸದರಿಗಿಲ್ಲ ಕ್ಯಾಂಟೀನ್ ಸಬ್ಸಿಡಿ: ಖಜಾನೆಗೆ ₹17 ಕೋಟಿ ಉಳಿತಾಯ

Last Updated 5 ಡಿಸೆಂಬರ್ 2019, 11:07 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಕ್ಯಾಂಟೀನ್‌ನಲ್ಲಿ ಊಟ ಮತ್ತು ಉಪಹಾರದ ಸಬ್ಸಿಡಿ ಪಡೆಯದಿರಲು ಸಂಸದರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರ ಸಲಹೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಲೋಕಸಭೆಯ ಸಂಸದೀಯ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಸಬ್ಸಿಡಿ ಬಿಟ್ಟುಕೊಡಲು ಒಪ್ಪಿಗೆ ನೀಡಿದ್ದಾರೆ. ಇದರಿಂದ ವರ್ಷಕ್ಕೆ ₹17 ಕೋಟಿ ಉಳಿತಾಯ ಆಗಲಿದೆ. ಇನ್ನು ಮುಂದೆ ಸಂಸತ್‌ ಕ್ಯಾಂಟೀನ್‌ನಲ್ಲಿ ಊಟ ಮತ್ತು ಉಪಹಾರವು ವಾಸ್ತವ ದರದಲ್ಲಿಯೇ ಮಾರಾಟ ಮಾಡಲಾಗುತ್ತದೆ.

ಈವರೆಗೆ ಸಬ್ಸಿಡಿ ದರದಲ್ಲಿ ಸಂಸದರಿಗೆ ದೊರೆಯುತ್ತಿದ್ದ ಊಟ,ಉಪಹಾರದ ವಿವರ

ಆಹಾರ ದರ (₹)
ಬ್ರೆಡ್‌ ಮತ್ತು ಬೆಣ್ಣೆ 6
ಚಪಾತಿ 2
ಚಿಕನ್‌ ಕರಿ 50
ಚಿಕನ್‌ ಕಟ್‌ಲೆಟ್‌ (ಪ್ರತಿ ಪ್ಲೇಟ್‌) 41
ತಂದೂರಿ ಚಿಕನ್‌ 60
ಕಾಫಿ 5
ಪ್ಲೇನ್‌ ದೋಸೆ 12
ಫಿಶ್‌ ಕರಿ 40
ಹೈದರಾಬಾದಿ ಚಿಕನ್‌ ಬಿರಿಯಾನಿ 65
ಮಟನ್‌ ಕರಿ 45
ಅನ್ನ 7
ಸೂಪ್‌ 14

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT