ಭಾನುವಾರ, ನವೆಂಬರ್ 17, 2019
24 °C
ಅಯೋಧ್ಯೆ ವಿವಾದ: ಬಾಬರಿ ಮಸೀದಿ ಪರ ವ್ಯಾಜ್ಯ ಹೂಡಿದ್ದ ಇಕ್ಬಾಲ್

ಅಯೋಧ್ಯೆ ತೀರ್ಪಿಗೆ ಖುಷಿ, ಮೇಲ್ಮನವಿ ಇಲ್ಲ: ಇಕ್ಬಾಲ್ ಅನ್ಸಾರಿ

Published:
Updated:

ಹೊಸದೆಹಲಿ: ಅಯೋಧ್ಯೆಯ ರಾಮ ಮಂದಿರ ಹಾಗೂ ಬಾಬರಿ ಮಸೀದಿ ಜಮೀನಿನ ಒಡೆತನದ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲ ಮುಸ್ಲಿಮರೂ ಗೌರವಿಸುತ್ತಾರೆ, ಮರುಪರಿಶೀಲನೆಗೆ ಅರ್ಜಿ ಹಾಕುವುದಿಲ್ಲ ಎಂದು ಈ ವ್ಯಾಜ್ಯದಲ್ಲಿ ಬಾಬರಿ ಮಸೀದಿ ಪರ ವಾದಿಗಳಾದ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

Ayodhya Verdict Highlights: ಅಯೋಧ್ಯೆ ತೀರ್ಪು ಮುಖ್ಯಾಂಶಗಳು ಇಲ್ಲಿವೆ

ತೀರ್ಪು ಪ್ರಕಟವಾಗುವ ಮುಂಚೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, 40 ದಿನಗಳ ಸತತ ವಿಚಾರಣೆಯ ಬಳಿಕ ಈಗ ಈ ವಿವಾದಕ್ಕೆ ಪರಿಹಾರ ದೊರೆಯುತ್ತಿರುವುದು ಸ್ವಾಗತಾರ್ಹ. ಏನೇ ತೀರ್ಪು ಬಂದರೂ ಅದನ್ನು ಒಪ್ಪುತ್ತೇವೆ. ದೇಶದ ಮುಸಲ್ಮಾನರು ಈ ನೆಲದ ಕಾನೂನನ್ನು ಗೌರವಿಸುತ್ತೇವೆ ಎಂದಿದ್ದಾರಲ್ಲದೆ, ತೀರ್ಪು ಮರುಪರಿಶೀಲನೆಗೆ ಅರ್ಜಿ ಹಾಕುವುದಿಲ್ಲ ಎಂದಿದ್ದಾರೆ.

ಇದೇ ವೇಳೆ, ತೀರ್ಪು ಬಂದ ತಕ್ಷಣ ಪ್ರತಿಕ್ರಿಯಿಸಿರುವ ಅವರು, ಸಂತಸ ವ್ಯಕ್ತಪಡಿಸಿದ್ದು, ಕೋರ್ಟ್ ತೀರ್ಪನ್ನು ಗೌರವಿಸುವುದಾಗಿ ಹೇಳಿದ್ದಾರೆ.

ಅಯೋಧ್ಯೆಯಲ್ಲೀಗ ಕಲ್ಲು ಕೆತ್ತನೆ ಸ್ಥಗಿತವಾಗಿದೆ

70 ವರ್ಷಗಳಿಂದ ನಡೆಯುತ್ತಿರುವ ವಿವಾದಕ್ಕೆ ಈಗ ಪರಿಹಾರ ದೊರೆಯುತ್ತಿದೆ. ಇದು ತುಂಬಾ ಒಳ್ಳೆಯ ಸಂಗತಿ. ಇಡೀ ಹಿಂದೂಸ್ತಾನವೇ ಇದಕ್ಕೆ ಪರಿಹಾರವನ್ನು ನಿರೀಕ್ಷಿಸುತ್ತಿದೆ. ಈ ಕಾನೂನು ಹೋರಾಟ ಆರಂಭಿಸಿದವರಲ್ಲಿ ಕೆಲವರು ಈಗಿಲ್ಲ, ಕೆಲವರು ಮಾತ್ರ ಇದ್ದಾರೆ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

Ayodhya Verdict: ಕ್ಷಣ ಕ್ಷಣದ ವರದಿ ಇಲ್ಲಿದೆ

ಪ್ರತಿಕ್ರಿಯಿಸಿ (+)