ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್ ಟ್ರೆಂಡಿಂಗ್: ಪ್ರಧಾನಿ ಮೋದಿ ಹೇಳಿದ ‘ನನ್ನ ₹15 ಲಕ್ಷ ಕಥೆ’!

Last Updated 4 ಏಪ್ರಿಲ್ 2019, 4:35 IST
ಅಕ್ಷರ ಗಾತ್ರ

ಬೆಂಗಳೂರು:ನನ್ನ ಪ್ರಿಯಕರನಿಗಾಗಿ ಬಕಿಂಗ್‌ಹ್ಯಾಂ ಅರಮನೆಯನ್ನು ಕಾಯ್ದಿರಿಸಿದ್ದೇನೆ,ನನ್ನ ಸ್ವಂತ ಬಳಕೆಗಾಗಿ ಒಂದು ರಫೇಲ್ ಖರೀದಿಸುವೆ, ಬುರ್ಜ್ ಖಲೀಫಾ ಖರೀದಿ ಒಪ್ಪಂದಕ್ಕೆ ಸಹಿ ಮಾಡಿದ್ದೇನೆ, ಮಂಗಳ ಗ್ರಹ ಪ್ರಯಾಣಕ್ಕೆ ಸಿದ್ಧತೆ ನಡೆಸಿದ್ದೇನೆ...

–ಐದು ವರ್ಷ ಕಳೆದರೂ ಖಾತೆಗಳಿಗೆ ₹15 ಲಕ್ಷ ಬಾರದಿದ್ದನ್ನು ಜನ ಈ ರೀತಿಯಾಗಿವ್ಯಂಗ್ಯ ಮಾಡಿದ್ದಾರೆ. ಇದು#My15LakhStory ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಟ್ವಿಟರ್ನಲ್ಲಿಟ್ರೆಂಡ್‌ ಆಗುತ್ತಿದೆ.

ಕಳೆದ ಲೋಕಸಭಾ ಚುನಾವಣೆ ಪ್ರಚಾರದ ವೇಳೆಪ್ರಧಾನಿ ನರೇಂದ್ರ ಅವರು ಸ್ವಿಸ್‌ ಬ್ಯಾಂಕ್‌ನಲ್ಲಿರುವ ಕಾಂಗ್ರೆಸ್‌ನವರಕಪ್ಪು ಹಣ ತರುತ್ತೇನೆ. ಆ ಹಣದಿಂದ ದೇಶದಲ್ಲಿನಎಲ್ಲರ ಖಾತೆಗಳಿಗೆ ₹15 ಲಕ್ಷ ಹಂಚಬಹುದು ಎಂದು ಹೇಳಿದ್ದರು. ಅಲ್ಲದೆ, ಕಪ್ಪು ಹಣ ಹೊರತರುವುದಕ್ಕೆ ನೋಟು ರದ್ಧತಿ ಮಾಡಲಾಗಿದೆ ಎಂದು ಅವರ ಭಾಷಣದಲ್ಲಿ ಪದೇ ಪದೇ ಪುನರುಚ್ಛರಿಸಿದ್ದರು. ಆದರೆ, ಅದ್ಯಾವುದೂ ಆಗಿಲ್ಲ ಎನ್ನುವುದನ್ನು ಜನ ಟ್ವೀಟ್‌ನಲ್ಲಿ ಹೇಳುತ್ತಿದ್ದಾರೆ.

ಖಾತೆಗೆ ಬಂದ ₹15 ಲಕ್ಷದಲ್ಲಿ ಏನೆಲ್ಲ ಮಾಡಿದೆವು ಎನ್ನುವುದನ್ನು ವ್ಯಂಗ್ಯವಾಗಿ ತರಹೇವಾರಿ ಕಥೆಗಳ ಮೂಲಕ ಜನ ನಿರೂಪಿಸಿದ್ದಾರೆ.

ನಾನು ಬಡವನಾಗಿದ್ದೆ. ಓದುವುದಕ್ಕೂ ಸಾಧ್ಯವಾಗಿರಲಿಲ್ಲ. ಒಂದು ದಿನ ನನಗೆ ₹15 ಲಕ್ಷದ ಯೋಜನೆ ಬಗ್ಗೆತಿಳಿಯಿತು. ಆಗ ನನಗೆ ನೆಮ್ಮದಿಯಾಯಿತು. ಯಾಲೆ ವಿಶ್ವವಿದ್ಯಾಲಯದಿಂದ ಪದವಿ ಪಡೆದೆ. ನನ್ನ ಕೋರ್ಟ್‌ ವ್ಯಾಜ್ಯವೂ ಇತ್ಯರ್ಥವಾಯಿತು. ಈಗಷ್ಟೇ ನಾನು 3ನೇ ಬಂಗಲೆಯನ್ನುಖರೀದಿಸಿದೆ... ಹೀಗೆಂದು ಪುಲ್ಕಿತ್ ಎನ್ನುವವರ ಕಥೆ.

’ನನ್ನ ಖಾತೆಗೆ ಬಂದ ₹15 ಲಕ್ಷದಲ್ಲಿ, ನೀವು ಅಭಿವೃದ್ಧಿಪಡಿಸಿದ ಎಲ್ಲಾ ಸ್ಮಾರ್ಟ್‌ ಸಿಟಿಗೆ ಬುಲೆಟ್‌ ಟ್ರೈನ್‌ನಲ್ಲಿ ಪ್ರಯಾಣಿಸಿದೆ. ಜೊತೆಗೆ ₹40ಗೆ ಒಂದು ಅಮೆರಿಕ ಡಾಲರ್‌ ಸರಿಸಮ ಎನ್ನುವ ಹೆಮ್ಮೆಯಿಂದ ಓಡಾಡಿದೆ‘ ಎಂದು ಅಸ್ಗರ್ ಎನ್ನುವವರು ಬರೆದುಕೊಂಡಿದ್ದಾರೆ.

ದೀಪ ಪ್ರಕಾಶ್ಪಂತ್ ಎನ್ನುವವರೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘2014ರಲ್ಲಿ ಪ್ರಧಾನಿ ಮೋದಿ ಅವರು ನನ್ನ ಖಾತೆಗೆ ಹಾಕಿದ್ದ ₹15 ಲಕ್ಷ ಕಾಣಿಸುತ್ತಿಲ್ಲ’ ಎಂಬತಮ್ಮ ಟ್ವೀಟ್‌ ಅನ್ನು ಎಸ್‌ಬಿಐಗೆ ಟ್ಯಾಗ್‌ ಮಾಡಿದ್ದಾರೆ.

ನನಗೆ ಬಂದ ₹15 ಲಕ್ಷವನ್ನು ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯನ್ನುಜಪಾನ್‌ನಕ್ಯೋಟೋ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ದೇಣಿಗೆಯಾಗಿ ನೀಡಿದ್ದೇನೆ ಎಂದು ರಿಜಿನ್ ವ್ಯಂಗ್ಯವಾಡಿದ್ದಾರೆ.

ಅಮಿತ್‌ ಶಾ ಮಗನ ಕಂಪನಿಯ ಶೇರ್‌ಗಳನ್ನು ಪಡೆದು ನಾನು ಲಕ್ಷಾಧೀಶ್ವರನಾದೆ. ಧನ್ಯವಾದಗಳು ಮೋದಿ ಜಿ ಎಂದು ಆಕಾಶ್‌ನೂರ್‌ ಬರೆದುಕೊಂಡಿದ್ದಾರೆ.

ಹೀಗೆ ಸಾಕಷ್ಟುಕಥೆಗಳು ಈ ಹ್ಯಾಷ್‌ಟ್ಯಾಗ್‌ ಮೂಲಕ ಟ್ವಿಟರ್‌ನಲ್ಲಿ ರಾರಾಜಿಸುತ್ತಿವೆ. ಸುಮಾರು 7 ಸಾವಿರ ಮಂದಿ ಈ ಕುರಿತು ಟ್ವೀಟ್‌ ಮಾಡಿದ್ದಾರೆ.#My15LakhStory ಎನ್ನುವುದು ಈಗ ಟ್ವಿಟರ್ನಲ್ಲಿ ಟ್ರೆಂಡ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT