ಶನಿವಾರ, ಆಗಸ್ಟ್ 24, 2019
21 °C

ಎಲ್ಲಿದೆ ದುಡ್ಡು?: ಪ್ರಧಾನಿ ಭಾಷಣದಲ್ಲಿ ಹೇಳಿದ ಆರ್ಥಿಕತೆ ಬಗ್ಗೆ ಕಾಂಗ್ರೆಸ್ ಟೀಕೆ

Published:
Updated:

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಹೊಗಳಿದ್ದರು. ಮೂಲಸೌಕರ್ಯ ಮತ್ತು ಅಭಿವೃದ್ಥಿಗಾಗಿ ಕೇಂದ್ರ ಸರ್ಕಾರ  ₹100 ಲಕ್ಷ ಕೋಟಿ ಹೂಡಿಕೆ ನಡೆಸಲಿದೆ. ಜಿಎಸ್‌ಟಿಯಿಂದಾಗಿ ಒಂದು ದೇಶ ಒಂದು ತೆರಿಗೆ ಸಾಧ್ಯವಾಗಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರುಯ

ಮೋದಿಯವರು ಭಾಷಣದಲ್ಲಿ ಉಲ್ಲೇಖಿಸಿರುವ ಆರ್ಥಿಕತೆ ಬಗ್ಗೆ ಟೀಕಿಸಿದ ಕಾಂಗ್ರೆಸ್ ಎಲ್ಲಿದೆ ದುಡ್ಡು? ಎಂದು ಕೇಳಿದೆ.

ಈ ಬಗ್ಗೆ ಟ್ವೀಟಿಸಿದ ಕಾಂಗ್ರೆಸ್, ವೀಕ್ಷಕರು ಅಥವಾ ಮಾಧ್ಯಮದವರ ಗಮನ ಸೆಳೆಯುವುದು- ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪ್ರಧಾನಿ ಮೋದಿಯವರ ಕಾರ್ಯ ವಿಧಾನ, ಆರ್ಥಿಕ ಪರಿಸ್ಥಿತಿ ಮತ್ತು ಮೂಲ ಸೌಕರ್ಯ ಅಭಿವೃದ್ದಿಗಾಗಿ ಖರ್ಚುಗಳ ಲೆಕ್ಕ ನೋಡಿದರೆ ನಮಗಿರುವುದು ಒಂದೇ ಪ್ರಶ್ನೆ ದುಡ್ಡು ಎಲ್ಲಿದೆ?

ಟ್ವೀಟ್ ಜತೆಗೆ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂಬುದನ್ನು ತೋರಿಸುವ ಗ್ರಾಫಿಕ್ಸ್‌ನ್ನು ಕಾಂಗ್ರೆಸ್ ಲಗತ್ತಿಸಿದೆ.

ಅದೇ ವೇಳೆ ಮೋದಿ ಹೇಳಿದಂತೆ ಈಗಿನ ಪರಿಸ್ಥಿತಿಯಲ್ಲಿ 3 ಟ್ರಿಲಿಯನ್ ಡಾಲರ್ ಆರ್ಥಿಕ ಬೆಳವಣಿಗೆ ಸಾಧ್ಯವಾಗುವಂತದ್ದಲ್ಲ. ಮುಂದಿನ  5 ವರ್ಷಗಳಲ್ಲಿ ಜಿಡಿಪಿ ಶೇ.9 ಹೂಡಿಕೆಗಿರುವ ಅಭಿವೃದ್ಧಿ ದರ ಶೇ. 38 ಆಗಬೇಕು. ನಮ್ಮ ಈಗಿನ ಅಭಿವೃದ್ಧಿ ದರ ಶೇ. 6.8 ಆಗಿದ್ದು  ಹೂಡಿಕೆ ದರ ಶೇ. 31.3 ಆಗಿದೆ ಎಂದು ಕಾಂಗ್ರೆಸ್ ಟ್ವೀಟಿಸಿದೆ.

ಇದನ್ನೂ ಓದಿ

ಮೋದಿ ಭಾಷಣ: ಸೇನೆಯಲ್ಲಿ ಸಿಡಿಎಸ್‌ ಎಂಬ ಹೊಸ ಹುದ್ದೆ ಸೃಷ್ಟಿ
ಕುಟುಂಬ ಯೋಜನೆಯೇ ನಿಜವಾದ ದೇಶಭಕ್ತಿ: ನರೇಂದ್ರ ಮೋದಿ 

Post Comments (+)