ಮಂಗಳವಾರ, ಆಗಸ್ಟ್ 3, 2021
20 °C

ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್ ಗೋಯಲ್ ನಿವಾಸದಲ್ಲಿ ಇ.ಡಿ ಶೋಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜೆಟ್‌ ಏರ್‌ವೇಸ್‌ನ ಸಂಸ್ಥಾಪಕ ನರೇಶ್‌ ಗೋಯಲ್‌ ಅವರಿಗೆ ಸೇರಿದ ಮನೆ ಹಾಗೂ ಇತರ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಶೋಧ ಕಾರ್ಯ ನಡೆಸಿತು.

ನರೇಶ್‌ ಅವರು ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಉಲ್ಲಂಘನೆ ಹಾಗೂ ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಮುಂಬೈಯಲ್ಲಿರುವ ಅವರ ಮನೆ, ಇತರ ಕಟ್ಟಡಗಳು ಹಾಗೂ ದೆಹಲಿಯಲ್ಲಿನ ಕಚೇರಿಗಳಲ್ಲಿ ಸಹ ಅಧಿಕಾರಿಗಳು ಶೋಧಿಸಿದರು.

2012ರಲ್ಲಿ ಸ್ಥಾಪನೆಗೊಂಡ ಜೆಟ್ ಪ್ರಿವಿಲೇಜ್‌ ಪ್ರೈವೇಟ್‌ ಲಿ. (ಜೆಪಿಪಿಎಲ್‌), ಎತಿಹಾದ್‌ ಗ್ರೂಪ್‌ನ ಅಂಗಸಂಸ್ಥೆಯಾದ ಜೆಟ್‌ ಏರ್‌ ವೇಸ್‌ನಲ್ಲಿ ಶೇ 49.9ರಷ್ಟು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ತೀವ್ರ ನಷ್ಟ ಅನುಭವಿಸಿದ ಸಂಸ್ಥೆ ಕಳೆದ ಏಪ್ರಿಲ್‌ 17ರಂದು ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿತು. ಜೆಪಿಪಿಎಲ್‌ ಭಾರಿ ಅವ್ಯವಹಾರ ನಡೆಸಿರುವುದು ಪತ್ತೆಯಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು