ಬುಧವಾರ, ಜೂನ್ 3, 2020
27 °C
ಏ.5ರಂದು ರಾತ್ರಿ ದೇಶದ ಒಟ್ಟು ವಿದ್ಯುತ್‌ ಬೇಡಿಕೆಯಲ್ಲಿ ಕಂಡು ಬಂದಿತ್ತು ಭಾರಿ ಕುಸಿತ

ಪ್ರಧಾನಿ ಮೋದಿ ಕರೆಗೆ ಬೆಂಬಲ: 32,000 ಮೆಗಾವಾಟ್‌ನಷ್ಟು ವಿದ್ಯುತ್‌ ಬೇಡಿಕೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಕೊರೊನಾ ವೈರಾಣು ವಿರುದ್ಧದ ಹೋರಾಟದ ಭಾಗವಾಗಿ ಏ.5ರಂದು ರಾತ್ರಿ 9ಕ್ಕೆ 9 ನಿಮಿಷಗಳ ಕಾಲ ಮನೆಯ ಲೈಟುಗಳನ್ನು ಆರಿಸಿ, ಹಣತೆ– ಮೊಂಬತ್ತಿ ಬೆಳಗಿ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆ ಪರಿಣಾಮ, ದೇಶದ ಒಟ್ಟು ವಿದ್ಯುತ್‌ ಬೇಡಿಕೆಯಲ್ಲಿ 32,000 ಮೆಗಾವಾಟ್‌ನಷ್ಟು ಕುಸಿತ ಕಂಡು ಬಂದಿತ್ತು.

‘ವಿದ್ಯುತ್‌ ಬೇಡಿಕೆಯಲ್ಲಿ ಇಷ್ಟೊಂದು ಕುಸಿತ ಕಂಡು ಬಂದಿರುವುದು ಪ್ರಧಾನಿ ನೀಡಿದ್ದ ಕರೆಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದನ್ನು ತೋರುತ್ತದೆ’ ಎಂದು ವಿದ್ಯುತ್‌ ಸಚಿವ ಆರ್‌.ಕೆ.ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ಉತ್ತರದಲ್ಲಿ ಉತ್ತಮ : ಪ್ರಧಾನಿ ಕರೆಗೆ ಉತ್ತರ ಭಾರತೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ದಕ್ಷಿಣ ಭಾರತೀಯರ ಮೇಲೆ ಈ ಕರೆ ಅಷ್ಟೊಂದು ಪ್ರಭಾವ ಬೀರಿಲ್ಲ ಎಂಬ ಕುತೂಹಲಕರ ಸಂಗತಿಯೂ ಗೊತ್ತಾಗಿದೆ ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ವಿದ್ಯುತ್‌ ಬೇಡಿಕೆಯಲ್ಲಿ ಉತ್ತರ ಭಾರತದಲ್ಲಿ ಶೇ 30.6ರಷ್ಟು ಕುಸಿತ ಕಂಡುಬಂದಿದ್ದರೆ, ದಕ್ಷಿಣ ಭಾರತದಲ್ಲಿ  ಕುಸಿತದ ಪ್ರಮಾಣ ಶೇ 17.1ರಷ್ಟಿತ್ತು ಎಂದು ಪವರ್ ಸಿಸ್ಟಂಸ್ ಆಪರೇಷನ್‌ ಕಾರ್ಪೋರೇಷನ್‌ನ (ಪೊಸೊಕೊ) ಡಾಟಾ ವಿವರಿಸುತ್ತದೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ 909 ಮೆಗಾವಾಟ್ ವಿದ್ಯುತ್ ಬೇಡಿಕೆ ಕುಸಿತ: ‘ರಾಜ್ಯದ ವಿದ್ಯುತ್‌ ಬೇಡಿಕೆ 7,116 ಮೆಗಾವಾಟ್‌ ಇತ್ತು. ಆದರೆ, 9.09ಕ್ಕೆ ಇದು 6,207 ಮೆಗಾವಾಟ್‌ಗೆ ಇಳಿಯಿತು. ಅಂದರೆ, ಈ ಸಮಯದಲ್ಲಿ ರಾಜ್ಯದ ವಿದ್ಯುತ್‌ ಬೇಡಿಕೆ 909 ಮೆಗಾವಾಟ್‌ನಷ್ಟು ಕಡಿಮೆಯಾಗಿತ್ತು’ ಎಂದು ಕೆಪಿಟಿಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು